ಗೆಳತಿ.. ಎಚ್ಚರ 
**************
ಟೀನ್ ವಯಸೆಂದು
ಬಣ್ಣದ ಚಿಟ್ಟೆಯೆಂದು
ಚೆಲ್ಲಾಡದಿರು..
ಸ್ನೇಹಿತರು ಬೇಕೆಂದು
ಹೊಸ ಸಂಬಂಧವೆಂದು
ಮರುಳಾಗದಿರು..
ಮಾತುಗಳು ಸಮಯವ
ಮೀರದಿರಲಿ..
ಭಾವನೆಗಳು ಏಕಾಗ್ರತೆಯ
ಕಲಕದಿರಲಿ..
ಸಿಡಿಕೋಪವ ಹಿರಿಯರಲಿ
ತೋರದಿರು...
ಹೆತ್ತವರ ಲಕ್ಷ್ಮಣ ರೇಖೆಯ
ದಾಟದಿರು...
ಅಪಹರಿಸಲು ಸೀತೆಯ
ಬಾಳಲಿ, ಹತ್ತುತಲೆಯ
’ರಾವಣ’ ಒಬ್ಬನೇ..
ಇಲ್ಲಿ ನಿನ್ನನು ಆಡಿಸಲು
ಒಂದು ತಲೆಯ
ರಾವಣರೇ ಜಗದಲಿ..
ಸಖೀ ಬೀಳದಿರು
ಬಾವಿಯಲಿ ಎಡವಿ,
ಸಿಗದೇ ಇರಬಹುದು
ಏಣಿ ಹೊರಬರಲು..!!!!
ಪ್ರತಿಕ್ರಿಯೆ (5)