" ಕೈ ಬೀಸಿ ಕರೆದ"
***************

ಸುಂದರವಾದ ಸಂಜೆಯಲಿ
ನನ್ನ ಕನಸಿನ ಉದ್ಯಾನವನದಲಿ
ತಣ್ಣಗಿನ ಗಾಳಿಗೆ ಮೈಯ್ಯೊಡ್ಡಿ
ನಾ ಮುಂದೆ ಹೋಗುತಿರಲು,

ಹಕ್ಕಿಗಳ ಹಾಡಿನ ಸ್ವಾಗತ
ಕಾರಂಜಿ ಪನ್ನೀರನು ಚಿಮುಕಿಸಿ
ಮರಗಳು ಬಣ್ಣದಿಂದ ಬಾಗಿ
ಹೂಗಳು ದಾರಿಯುದ್ದ ಹಾಸಿ,

ಎಲೆಗಳೇ ಚಾಮರವ ಬೀಸಿ
ಆಶ್ಚರ್ಯದಿ ನಾ ಎದುರೆ
ಕಣ್ಣ ದೂರಕೆ ಹಾಯಿಸಲು,
ಅಲ್ಲಿ.. ಕೈಬೀಸಿ ಕರೆಯುತಿರುವ
ನನ್ನ ಕನಸಿನ ರಾಜಕುಮಾರ!!! :)