ನನ್ನವಳಿಗೆ ಮೊಬೈಲ್
ಎಂದರೆ ಮಹಾ
ಸಿಟ್ಟು!
ಏಕೆಂದರೆ ಅವಳ ಜೊತೆಗಿಂತ
ಮೊಬೈಲ್ ನಲ್ಲೆ
ನನ್ನ ಮಾತು
ಹೆಚ್ಚು!!
-------------
ಮೊದಲು ನನ್ನವಳ
ಕೈ ಸೇರಬೇಕು
ದಿನ ಪತ್ರಿಕೆ!
ಒಂದು ಕ್ಷಣ
ರಾಶಿ ಫಲದ ಮೇಲೆ
ಕಣ್ಣಾಡಿಸಲು
ಮಾತ್ರಕ್ಕೆ!!
------------
ತಿಂಗಳ ಕೊನೆಯಲ್ಲಿ
ಏನೇ ಕೇಳಿದರೂ
ಕೋಪಗೊಳ್ಳುವ
ನನ್ನವಳು!!
ತಿಂಗಳ ಮೊದಲಿಗೆ
ಏನೇ ಹೇಳಿದರೂ
ಕಿರುನಗು
ಬೀರುವಳು!!
-------
ಬಿಕ್ಷುಕ ಬಂದರೆ
ಹಿಡಿ ಅನ್ನ
ಹಾಕದವಳು!
ತವರಿನವರು ಬಂದರೆ
ಮುಡಿ ಅನ್ನ
ಬಡಿಸುವಳು!!
ಪ್ರತಿಕ್ರಿಯೆ (5)