ಅತ್ತರೂ....
ನಲ್ಲೆ..
ನಿನ್ನ ಮೈ ಬೆವರ ವಾಸನೆಗೆ
ನಾನಷ್ಟು ಅತ್ತರೂ...!
ನೀನೇಕೆ..
ಹಚ್ಚಿಕೊಂಡಿಲ್ಲ
ನಾ ಕೊಟ್ಟ ಮಲ್ಲಿಗೆಯ 'ಅತ್ತರು'
ನೈಟಿ..
ಹಗಲಿಗೂ..
ಸ್ತ್ರೀಯರು ಧರಿಸುವರು
ನೈಟಿ
ಅದಕ್ಕೇಕೆ ಹೆಸರಿಸಬಾರದು
ಡೆ-ನೈಟಿ !
ಪೇಯ
ನಲ್ಲೆ..
ಬಾಯಾರಿದೆ
ಬೇಗ ಕೊಡು ಪೇಯ
ಆಮೇಲೆ
ನಿನಗೊಪ್ಪಿಸುವೆ
ಈ ತಿಂಗಳ
pay ಯ
ದ್ವಾರ
ನಮ್ಮೂರ ಸಾಹಿತ್ಯ ವೇದಿಕೆಯ
ಉದ್ಘಾಟನಾ ಸಮಾರಂಭ
ಸಭಾ ಮಂಟಪದ ದ್ವಾರಕ್ಕೆ
ಗುತ್ಯಪ್ಪ ಧರ್ಮಪ್ಪ ದಾನಿಯ
ಹೆಸರು.....!
ಕಲಾವಿದ ಸಂಕ್ಷಿಪ್ತವಾಗಿ
ಫಲಕದಲಿ ಬರೆದಿದ್ದ
"ಗು ದ ದ್ವಾರ" ಎಂದು !
ಪ್ರತಿಕ್ರಿಯೆ (2)