ಯಾವುದೋ ಮರದ ಮಾಗಿದ ಹಣ್ಣು
ಒಡಲು ತುಂಬಿಸಿಕೊಂಡ ಹಕ್ಕಿ
-ಯ ಹಿಕ್ಕೆಯಿಂದ ಹೊರಬಿದ್ದ ಬೀಜ
ಗಿಡವಾಗಿ... ಇಂದು ಹೆಮ್ಮರವಾಗಿ.!
ನೂರಾರು ತಲೆಗಳಿಗೆ ತಂಪು
ಮರದಲ್ಲಿ ಆಡಿ ಹಾಡುವ ಹಕ್ಕಿಗಳ ಗುಂಪು
ಬೇಧವರಿಯದ ಮರಕ್ಕೀಗ ಧನ್ಯತೆಯ ಭಾವ
ಮರದ ಬುಡದಲ್ಲಿ ಎಂದೋ ಬಿದ್ದೇ ಇದ್ದ
ಕಲ್ಲು .....ಈಗ ಮೈಕೆಂಪಾಗಿಸಿಕೊಂಡು
ಎದ್ದು ನಿಂತಿದೆ...!
ಈಗ ಅಲ್ಲಿ ಮರ ಮತ್ತು ಅದರೊಟ್ಟಿಗಿನ
ಜೀವ ಸಂಕುಲ ಜೀರ್ಣವಾಗುತ್ತದೆ.
ಏಕೆಂದರೆ......
ದೇವಸ್ಥಾನದ ಜೀರ್ಣೋದ್ಧಾರವಾಗುತ್ತಿದೆ.!!!
ಜೀರ್ಣೋದ್ಧಾರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!