"ಮನದ ಮಾತು!"
************

ಹಂಬಲಿಸಿದ್ದೆ ನಾನು...
ಅಣ್ಣನ ಒಂದು ಹಿಡಿ ಪ್ರೀತಿಯನು,
ಕರುಣಿಸಿರಲಿಲ್ಲ ದೇವನು
ಅಣ್ಣನ ಆ ಅಪ್ಪುಗೆಯನು..
ಬಂದ ಬದುಕಲಿ ಅರಸಿದೆನು,
ಖಾಸಗಿ ರಕ್ಷಾ ಕೈಯನು..
ಅಂತೂ ಉಡುಗೊರೆ ಇಟ್ಟ ದೇವನು,
ನನ್ನ ಬಾಳಿಗೊಂದು ಅಣ್ಣನನು..
ಮನದಲ್ಲಿ ಕೊಟ್ಟು ಬಿಟ್ಟಿದ್ದೆನು,
ಒಡಹುಟ್ಟಿದ ಪ್ರಥಮತೆಯನು..
ಓದಲು ಹುರಿದುಂಬಿಸಿದನು,
ಬರಹಗಳಿಗೆ ಸ್ಪೂರ್ತಿಯಾದನು..
ತೊಂದರೆಗಳಿಗೆ ಪರಿಹಾರವಾದನು.
ತಂಗಿಗೆಂದೂ ಆಶೀರ್ವದಿಸಿದವನು..
ಅಣ್ಣನಿದ್ದರೆಂದು ಬೀಗುತ್ತಿದ್ದ
ತಂಗಿಯರಲ್ಲಿ ನಾನೂ ಒಬ್ಬಳಾದೆನು..
ಚಲಿಸಿದವು ಕಾಲದ ಮುಳ್ಳುಗಳು
ದೂರವಾಗುತ್ತಿದ್ದಂತಾಯಿತು ಕೈಗಳು..
ಬದಲಾಗುತ್ತಿದೆ ಎಲ್ಲೋ ಏನೋ..
ಸಿಗದೆನಿಸಿತು ಹಿಂದಿನ ಅಣ್ಣನು..
ನೆನಪುಗಳು ಕಣ್ಣೀರನು ಇಳಿಸುತ್ತಿದ್ದವು,
ಗೌರವಿಸೆದ್ದೆನು ಅಣ್ಣನನು ಆ ಮಟ್ಟಕ್ಕೆ ನಾನು.
ಇತ್ತೀಚೆಗೆ ಮೌನವೇ ಮತಾಡುತ್ತಿದೆ..
ಗುನುಗುಡುವ ಅಣ್ಣನ ಮಾತುಗಳನು..
ಬಂದ ಬದುಕಲಿ ಯಾವುದು ನಮ್ಮದು?
ಯಾರನ್ನು ಮನಸ್ಸಿಂದ ಒಪ್ಪಬಾರದು..
ಬೆಳ್ಳಿಗೆ ಚಿನ್ನದ ಒಪ್ಪಹಾಕಿದರೂ..
ಬೆಳ್ಳಿ ಎಂದೂ ಚಿನ್ನವಾಗದು....!!!!
ಪ್ರತಿಕ್ರಿಯೆ (8)