ನಿನ್ನ ಸವಿನೆನಪೊಂದೆ
ನೀ ಕೊಟ್ಟ ಕಾಣಿಕೆ|
ಹತ್ತು ಹಲವು ಕನಸುಗಳು
ಗರಿಗೆದರಿ ಹಾರಿದವು
ಅಂದಿನ ಆ ದಿನಗಳಲ್ಲಿ||
ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ
ರಸಾನುಭವದ ಪುಳಕವು
ಮೈ ಮನದಲ್ಲಿ||
ಕೈ ಕೈ ಸಂಗಮದ ಸಮಯ
ಹರಿದ ರೊಮಾಂಚನದ ಮಿಂಚು
ಈಗಲೂ ಮಿಂಚುತ್ತಿದೆ ಆದರೆ ಬೆಳಕಿಲ್ಲ||
ಮರಳನಲ್ಲಿ ಕಟ್ಟಿದ ಗೋಪುರ
ನೀರ ಅಲೆಗೆ ಕುಸಿದು ವ್ಯಥೆಯಾಗಿದೆ,
ಅದನ್ನೆ ನೆನಪಿಸುವುದು ಬೇಕಿಲ್ಲ||
ಸಿಹಿ ನೆನಪು ಹತ್ತಿದ್ದರೂ
ಕಹಿಯನ್ನು ಓಡಿಸಲಾರವು ಅವುಗಳಿಗೆ
ದೇಹವಿಲ್ಲದಿದ್ದರೂ ಕಾಡದೆ ಬಿಡಲಾರವು||
ಎದೆಯ ಪೆಟ್ಟಿಗೆಯಲ್ಲಿ ನೆಲೆಯಾಗಿ
ಆಗಾಗ್ಗೆ ಬುಗ್ಗೆಯಾಗಿ
ಚುಮ್ಮಿ ಮೈಮನ ತಂಪಾದವು!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
ಮತದಾರರಾಗಿ ನಾವೇನು ಮಾಡಬೇಕು
ನನ್ನ ಮದುವೆಗೆ ಬನ್ನಿ
ಮತ್ತೊಮ್ಮೆ ಮಗುವಾಗಬಾರದೇ !
ಬಾವತೀರ
' ಶಿವ ಅಶಿವ '
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)