ಸ್ವಲ್ಪ ದಿನಗಳ ಕೆಳಗೆ ___LINK_OPEN_href="http://www.vismayanagari.com/node/3860" target="_blank" title="ರೆಲಿಗೇರ್"___ರೆಲಿಗೇರ್ ಅನ್ನೋ ಆರೋಗ್ಯ ತಪಾಸಣಾ ಕೇ೦ದ್ರದವರು ಹಿ೦ದಿ ಭಾಷೆಯಲ್ಲಿ ತಮ್ಮ ಹೆಲ್ತ್ ಪ್ಯಾಕೇಜ್ ಗಳ ಬಗ್ಗೆ ಕೈಪಿಡಿಗಳನ್ನು ಹ೦ಚುತ್ತಿದ್ದುದು ಆನ೦ತರ ತಮ್ಮ ತಪ್ಪು ಒಪ್ಪಿಕೊ೦ಡು ಕನ್ನಡದಲ್ಲಿ ಕೈಪಿಡಿಗಳನ್ನು ಮಾಡಿದ್ದ ನೆನಪು ಇನ್ನೂ ಹಸಿಯಾಗಿರುವಾಗಲೇ..  "___LINK_OPEN_href="http://www.clumaxdiagnostics.com/" target="_blank"___ಕ್ಲುಮಾಕ್ಸ್ ಡಯಾಗ್ನಸ್ಟಿಕ್ಸ್" ಎಂಬ "ಆರೋಗ್ಯ ತಪಾಸಾಣಾ ಸೇವೆ" (ಲ್ಯಾಬೋರೇಟರಿ) ಒದಗಿಸುವ ಕಂಪನಿಯೊಂದು ಬೆಂಗಳೂರಿನ ಜಯನಗರದಲ್ಲಿ ತನ್ನ ಶಾಖೆ ತೆರೆದಿದೆ. 
ಕಿಡ್ನಿ, ಮಧುಮೇಹ, ರಕ್ತದೊತ್ತಡ, ಹೃದ್ರೋಗ ಪರೀಕ್ಷೆಗಳಿಗೆ ಸ೦ಬ೦ಧಿಸಿದ೦ತೆ ಹಲವಾರು ಹೆಲ್ತ್ ಪ್ಯಾಕೇಜ್-ಗಳನ್ನು ಮಾಡಿದ್ದಾರೆ. 

ಎಲ್ಲಾ ಜಾಣ ತುಸು ಕೋಣ ಅನ್ನೋ ಹಾಗೆ...
ಇಲ್ಲೇ ಹುಟ್ಟಿ ಬೆಳೆದ ಈ ಕ೦ಪನಿಗೆ ಕನ್ನಡಿಗರೇ ತಮ್ಮ ಗ್ರಾಹಕರಾಗಿದ್ದರೂ ಕನ್ನಡದಲ್ಲಿ ತಮ್ಮ ಸೌಲಭ್ಯಗಳ ಬಗ್ಗೆ ಮಾಹಿತಿ ಮುದ್ರಿಸುವುದು ಅವಶ್ಯಕ ಎನಿಸಿದ೦ತೆ ಕಾಣುತ್ತಿಲ್ಲ. ಉದಾಹರಣೆಗೆ ಹೃದಯಕ್ಕೆ ಸಂಬಂಧಿಸಿದಂತಹ ಸಿ.ಟಿ. ಸ್ಕ್ಯಾನ್ ಎಂದರೇನು, ಈ ಪರೀಕ್ಷೆಯ ಉಪಯೋಗಗಳೇನು ಇತ್ಯಾದಿ ಹಲವಾರು ಉಪಯುಕ್ತ ಮಾಹಿತಿಗಳು ಇ೦ಗ್ಲೀಷಿನಲ್ಲೇ ಏಕಿರಬೇಕು? 
ಕನ್ನಡ ತಿಳಿದವರಿಗೆ ಹೃದ್ರೋಗ ಬರುವುದಿಲ್ಲ ಎಂಬ ನಂಬಿಕೆಯೇ ಇವರದ್ದು?

ಇಲ್ಲಿರುವ ಬೋರ್ಡ್-ಗಳು, ಕಡತಗಳು, ಗ್ರಾಹಕರಿಗೆ ತುಂಬಲು ಕೊಡುವ ಅರ್ಜಿ ಎಲ್ಲವೂ ಇ೦ಗ್ಲೀಷಿನಲ್ಲಿದ್ದರೂ, ಒಳಗಡೆ ಇರೋರೆಲ್ಲಾ ಕನ್ನಡಿಗರೇ..
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ಸಾಮಗ್ರಿ ಅಥವಾ ಸೇವೆಯಲ್ಲಿ ಕನ್ನಡ ಇರುವುದು ಅವಶ್ಯಕ.
ಇಲ್ಲದಿದ್ದರೆ ಗ್ರಾಹಕರಿಗಾಗಬಹುದಾದ ತೊಂದರೆಗಳ ದೊಡ್ಡ ಪಟ್ಟಿಯೇ ಮಾಡಬಹುದು.

 

" ತುರ್ತು ಸಮಯದಲ್ಲಿ ಆಂಬುಲೆನ್ಸ್ ಸೇವೆ ಪಡೆಯಲು ಯಾರನ್ನು ಸಂಪರ್ಕಿಸಬೇಕು" ಎಂಬ ಮಾಹಿತಿ ಕೂಡ ಇಂಗ್ಲಿಷ್-ನಲ್ಲಿ ಮಾತ್ರ ಇದೆ. ಈ ತಪಾಸಣಾ ಕೇ೦ದ್ರದ ಉದ್ದೇಶ ಬೆ೦ಗಳೂರಿನ ಕೆಲವರನ್ನು ಮಾತ್ರ ಮುಟ್ಟುವುದಾಗಿ ಕಾಣುತ್ತಿದೆ. ತನ್ನ ಹಾಗೂ ಗ್ರಾಹಕರ ನಡುವೆ ಇಂಗ್ಲಿಷ್  ಎಂಬ ಅಡ್ಡಗೋಡೆ ಏಕೆ ನಿರ್ಮಿಸಿಕೊ೦ಡಿದ್ದಾರೆ ಎ೦ಬುದನ್ನು ಅವರಲ್ಲಿ ಕೇಳಬೇಕಾಗಿದೆ.
ಆರೋಗ್ಯಕ್ಕೆ ಸ೦ಭ೦ದಿಸಿದ ಸೇವೆಗಳಲ್ಲಿ ಬಹಳ ಮುಖ್ಯ ಅಂಶವಾದ "ಪಾರದರ್ಶಿಕತೆ" ತರುವುದು ಜನರ ಭಾಷೆಯ ಬಳಕೆಯಿಂದಲೇ ಎಂಬುದು ಈ ಕಂಪನಿ ಅರಿತುಕೊಂಡಿಲ್ಲ. ಪಾರದರ್ಶಿಕತೆ ಇಲ್ಲದಿದ್ದರೆ ಒಬ್ಬ ಗ್ರಾಹಕ ತಾನು ಯಾವ ಪರೀಕ್ಷೆಗೆ ಒಳಪಡುತ್ತಿದ್ದೇನೆ ಮತ್ತು ಇದರಿ೦ದ ಏನು ಉಪಯೋಗಗಳು ಮತ್ತು ಇ೦ತಹ ಪರೀಕ್ಷೆಗೆ ಎಷ್ಟು ಹಣ ಕೊಡಬಹುದು/ಬಾರದು ಎ೦ಬುದನ್ನು ಮುಚ್ಚಿಟ್ಟಹಾಗಾಗಲ್ವಾ?



ಇವರು ರೆಲಿಗೇರ್ ರೀತಿಯಲ್ಲೇ ಬದಲಾಗಬೇಕು ಅ೦ದ್ರೆ ನಿಜವಾಗ್ಲೂ ಇವರು ಎ೦ತಹ ಗುಣಗಳುಳ್ಳ, ಯಾವ ಭಾಷೆ ಮಾತಾಡುವ ಗ್ರಾಹಕರಿಗೆ ತಮ್ಮ ಸೇವೆ ಕೊಡುತ್ತಿದ್ದೇವೆ ಅ೦ತ ಅರಿತುಕೊಳ್ಳಬೇಕಾಗಿದೆ. 
ಇದೇ ನಿಟ್ಟಿನಲ್ಲಿ ಇವರ ಬಗ್ಗೆ ಮಾಹಿತಿ ಬೇಕಿದ್ರೆ ಅಥ್ವಾ ಇವರಿಗೆ ಒ೦ದ್ನಾಲ್ಕ್ ಮಾತು ಹೇಳ್ಬೇಕು ಅನ್ಸಿದ್ರೆ ಕೆಳಗಿನ ಕೊ೦ಡಿಗೆ ಹೋಗಬಹುದು.

ಇವರ ಮಿಂಚೆ: ___LINK_OPEN_href="mailto:[email protected]" target="_blank"[email protected] 

ಅ೦ತರ್ಜಾಲ: ___LINK_OPEN_href="http://www.clumaxdiagnostics.com/contact.html" target="_blank"___http://www.clumaxdiagnostics.com/contact.html

___LINK_OPEN_href="http://s681.photobucket.com/albums/vv171/bhargavpinka/?action=view¤t=heart_CT_less_size.jpg" target="_blank"___CT Scan English