ಇನ್ನೇನು ಪೂರ್ಣ ಕತ್ತಲಾಗಬೇಕಷ್ಟೇ ,ಆದಾಗಲೇ ಸೂರ್ಯ ಮನೆಯೊಳಗೆ ಸೇರಿಯಾಗಿತ್ತು .ರಭಸದಿಂದ ಬಂದ ಬಸ್ಸು ಧಡಕ್ಕನೆ ಬ್ರೇಕ್ ಹಾಕಿದ ಹೊಡೆತಕ್ಕೆ ಒಂದೈದು ಮೀಟರ್ ಆಗಲ ಧೂಳ್ ಎದ್ದಿತು. ಯಾರೀ ಅದು "ಹಸಿರಾನೇ " ಕಂಡಕ್ಟರ್ ಕೂಗು ಕೇಳಿದ್ದೆ ತಡ ಪುಟ್ಟ ಲಗು ಬಗೆ ಇಂದ ಇಳಿದ .ಮತ್ತದೇ ಬರ್ರೋ ಎಂದು ಸದ್ದು ಮಾಡುತ್ತಾ ಬಸ್ಸು ಮುಂದೆ ಹೋಯಿತು .
ಹಸಿರಾನೇ ಒಂದು ಚಿಕ್ಕ ಹಳ್ಳಿ , ಆಧುನಿಕ ಪ್ರಪಂಚಕ್ಕೂ ತನಗೂ ಸಂಭದವೇ ಎಲ್ಲವೇನೋ ಅನ್ನೋ ಹಾಗಿತ್ತು ಅದರ ಪರಿಸ್ಥಿತಿ. ಪಟ್ಟಣಕ್ಕೆ ಹೋಗಲು 5 ಕೀ ಮಿ ನಡೆದು ಬಂದು ಬಸ್ಸು ಹಿಡಿಯಬೇಕಾಗಿತ್ತು . ವಿದ್ಯುತ್ ಎಂಬುದು ಮರೀಚಿಕೆಯಾಗಿ ಉಳಿದಿತ್ತು .ಶಾಸ್ತ್ರಿಗಳು ಅಲ್ಲಿಯವರಿಗೆ ವೈದ್ಯರಾಗಿದ್ದರು.ಪ್ರತಿಬಾರಿ ಚುನಾವಣೆಯ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಅಂತ ಹೇಳಿಕೊಳ್ಳುತ್ತಿದ್ದವರು ಬಂದು ಹೋಗುತ್ತಿದ್ದರು ಅಷ್ಟೇ . ಊರಿಗೆ ಸನಿಹ ಒಂದು ಚಿಕ್ಕ ಝರಿ ಹರಿಯುತ್ತದೆ , ಅದೇ ಅವರ ಮುಖ್ಯ ನೀರಿನ ಮೂಲ .ಸುತ್ತಲು ದಟ್ಟ ಕಾಡು ,ಪ್ರಕೃತಿ ಸಂಪತ್ತಿಗೇನು ಕೊರತೆಯಿರಲಿಲ್ಲ. ಜಗದ ಅರಿವಿಗೆ ಬರದ ಹಳ್ಳಿ ,ಒಂದೇ ಒಂದು ಘಟನೆಯಿಂದ ಜಗತ್ತನೆ ತಲ್ಲಣಿಸುತ್ತದೆ ಅಂತ ಯಾರು ಅಂದು ಕೊಂಡಿರಲಿಲ್ಲ .

ಪುಟ್ಟ ಬಿರಬಿರನೆ ಹೆಜ್ಜೆ ಹಾಕುತಿದ್ದ , ಮೊದಲೇ ಅಮಾವ್ಯಾಸೆ ಬೇರೆ.5 ಕೀ ಮಿ ಬೇರೆ ಕ್ರಮಿಸಬೇಕು . ಇದೇನು ಹೊಸದಾಗಿರಲಿಲ್ಲ ಅವನಿಗೆ ,ಎಷ್ಟೋ ಸಲ ರಾತ್ರಿ 12 ಕ್ಕೆಲ್ಲ ಒಬ್ಬನೇ ಓಡಾಡಿದ್ದ. ಬದುಕು ಅನಿವಾರ್ಯ ಆದಾಗ ಇವೆಲ್ಲ ಲೆಕ್ಕಕ್ಕೆ ಬರುವುದೇ ಇಲ್ಲ ಅಲ್ಲವೇ ? ಇದ್ದಿದ್ದರಲ್ಲಿ ಹೆಚ್ಚಿಗೆ ಓದಿದವನು ಅಂದ್ರೆ ಇವನೊಬ್ಬನೇ ಇಡೀ ಊರಿಗೆ .ಕಷ್ಟ ಬಿದ್ದು 8 ಕೀ ಮಿ ದುರಹೋಗಿ 7 ನೇ ತರಗತಿ ಪಾಸ್ ಮಾಡಿದ್ದ . ಅದಕ್ಕಿಂತ ಹೆಚ್ಚು ಓದುವ ಅನುಕೂಲ ಅವನಿಗಿರಲಿಲ್ಲ . ದಿನ ಪೂರ್ತಿ ಗೌಡ್ರಹೊಲದಲ್ಲಿ ದುಡಿದರೆ ಮಾತ್ರ ರಾತ್ರಿ ಓಲೆ ಹಚ್ಚುವ ಪರಿಸ್ಥಿತಿಯಲ್ಲೂ ಅವನನ್ನು ಅಷ್ಟು ಓಡಿಸಿದ್ದೆ ಅವರಪ್ಪ ಮಾಡಿದ ದೊಡ್ಡ ಸಾಧನೆ ಅನ್ನಬಹುದು .ಓದುವ ಗೀಳಿದ್ದ ಪುಟ್ಟ ಅವರಿವರ ,ತಾನು ರೇಡಿಯೋ ದಲ್ಲಿ ಕೇಳಿದ ಲೇಕಕರ ಪುಸ್ತಕ ತಂದು ಓದುತಿದ್ದ .

ಆದರೆ ಅಂದೇಕೋ ಅವನಿಡುತ್ತಿದ್ದ ಪ್ರತಿಯೊಂದು ಹೆಜ್ಜೆಯೂ ಭಾರವೆನಿಸುತ್ತಿತ್ತು ,ಅದಕ್ಕೆ ಕಾರಣ 2 ದಿನಗಳ ಹಿಂದಷ್ಟೇ ಸಂಭವಿಸಿದ ಬಸಿಯನ ಸಾವು .ಬಸಿಯ ಗೌಡ್ರ ಬಲಗೈ ಭಂಟ .ಸಹಜ ಸಾವಾಗಿದ್ದರೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ .ಆದರೆ ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು .ಶವದ ಮೈ ಮೇಲೆ ಯಾವುದೋ ಪ್ರಾಣಿ ಪರಚಿದಂತಿತ್ತು ,ಆದರೆ ಹೆಜ್ಜೆ ಗುರುತು ಮಾತ್ರ ಒಂದು 10 ಮಿ ಸುತ್ತಳತೆಯ ಮುಂದೆ ಇರಲಿಲ್ಲ ,ನಾಲಿಗೆ ಕಚ್ಚಿದ್ದು ನೋಡಿದರೆ ಕತ್ತು ಹಿಸುಕಿದಂತಿತ್ತು .ಊರಿಗೆ ಪೊಲೀಸರ ಆಗಮನ ಬೇಡವೆಂದು ಗೌಡರೇ ನಿಂತು ಅವನ ಶವ ಸಂಸ್ಕಾರ ಮಾಡಿಸಿದ್ದರು .ಅವರ ಮಾತಿಗೆ ಬೆಲೆಕೊಟ್ಟು ಎಲ್ಲರೂ ಸುಮ್ಮನಾಗಿದ್ದರು. ಆದರೂ ಒಳಗೊಳಗೆ ಗುಸು ಗುಸು ಪಿಸು ಪಿಸು ನಡೆದೇ ಇತ್ತು. ಇದೆಲ್ಲದರ ನಡುವೆ ಆ ಸಾವನ್ನು ತುಸು ಹೆಚ್ಚಾಗೇ ತಲೆಗೆ ಹಚ್ಚಿಕೊಂಡವನು ಪುಟ್ಟ .ಅದರ ಬಗ್ಗೆಯೇ ಏನೋ ಮಾಡಿಕೊಂಡು ಬರಲೆಂದು ಪಟ್ಟಣಕ್ಕೆ ಹೋಗಿದ್ದ ಅಂದು ,ಆದರೆ ಯಾರಲ್ಲೂ ಏನು ಹೇಳಿರಲಿಲ್ಲ .

ಕಾಡು ದಾರಿ ಬೇರೆ ಬಿಕೋ ಅನ್ನುತ್ತಿತ್ತು ,ಒಂದು ಪಕ್ಷಿಯೂ ಶಬ್ದ ಮಾಡುತ್ತಿರಲಿಲ್ಲ .ಕತ್ತಲು ಪೂರ್ಣ ದಾರಿಯನ್ನು ಆವರಿಸಿತ್ತು . ಪರಿಚಯವಿರುವ ದಾರಿಯಾದ್ದರಿಂದ ಸಲೀಸಾಗಿ ಯಾವುದೇ ಬೆಳಕ್ಕಿಲ್ಲದೇ ಹೋಗುತ್ತಿದ್ದ .ಆದರೂ ಮನಸಿನಲ್ಲಿ ಮೊನ್ನೆಯ ಸಾವಿನ ಯೋಚನೆಗಳೇ .ಅದು ನರಹಂತಕ ಚಿರತೆ ಇರಬಹುದೆ. ತೇಜಸ್ವಿ ಅವರ ನರಭಕ್ಷಕ ನೆನಪಾಯಿತು .ಜುಂ ಎಂದಿತು ಮನ,ತಕ್ಷಣ ಒಮ್ಮೆ ಹಿಂತಿರುಗಿ ನೋಡಿದ ಯಾರು ಇರಲಿಲ್ಲ ಅಲ್ಲಿ .ಹಾಳಾದ್ ಮನಸ್ಸು ಇಂತಾ ಸಮಯದಲ್ಲೇ ಇವೆಲ್ಲ ಯೋಚನೆಯಾಗಬೇಕಾ ಅಂದುಕೊಳ್ಳುತ್ತ ಮುಂದಿನ ಹೆಜ್ಜೆ ಇಟ್ಟಿದ್ದಾನಷ್ಟೇ ಸುಯ್ ಎಂದು ಕಣ್ಮುಂದೆ ಹಾರಿ ಹೋದ ಬಾವಲಿ ಒಮ್ಮೆ ಇವನ ಜೀವವನ್ನೇ ಹಾರಿಸಿತ್ತು .ಅಬ್ಬಾ ಬದುಕಿದೆಯಾ ಬಡ ಜೀವವೇ ಅಂದುಕೊಳ್ಳುತ್ತ ಒಮ್ಮೆ ದೀರ್ಘ ಉಸಿರು ಎಳೆದುಕೊಂಡು ಒಂದು 50 ಹೆಜ್ಜೆ ಮುಂದೆ ಹೋಗಿದ್ದ್ನಷ್ಟೇ ಮುಂದೆ ಕಂಡ ದೃಶ್ಯ ನೋಡಿ ಕಿಟಾರ್ ಎಂದು ಕಿರುಚಿ ಒಂದು ಕ್ಷಣ ಅವಾಕ್ಕಾಗಿ ನಿಂತ ............

(ಮುಂದುವರೆಯುವುದು ..........)