ನಿನ್ನ ಕನಸು
ಕನ್ನಡಿಯೊಳಗಿನ
ನಿಧಿ |
ಆಗಾಗ್ಗೆ ಬಂದು
ಮುಖ ತೋರಿಸಿ
ಮತ್ತೆ ಮರೆಯಾಗಿ
ಮಸುಕಾಗಿ ಪರದೆ
ಹಿಂದೆ ನೆಡೆಯುವ
ನಾಟಕದಂತೆ |
ನದಿಯೋ, ಕೆರೆ ಯೋ
ದಡದಲ್ಲಿ ಕುಳಿತಾಗ
ಆ ನೀರಿನಲ್ಲಿ ನಿನ್ನ ಬಿಂಬ
ಎತ್ತಲಿಂದಲೋ ತೂರಿ ಬಂದ
ಕಲ್ಲು ಎಸಗಿದ
ತೆರೆಯಂತೆ |
ಕನ್ನಡಿಯೊಳಗೆ
ಶ್ರಂಗರಿಸಿದ ನೀನು
ಎದುರಿನ ಯಾವುದೋ
ಸೆಳೆತಕ್ಕೆ ದಕ್ಕಿ ಹೋದಾಗ
ತಾರೆ ಚಂದ್ರರಿಲ್ಲದ
ಬರಿ ಬಾನಿನಂತೆ |
ಗೆಳತಿ ಆಗಾ
ಹಕ್ಕಿ ಹಾಡಲಿಲ್ಲ,
ಬೆಳ್ಳಿ ಮೂಡಲಿಲ್ಲ.
ಮತ್ತೆ ಹೇಗಾದಿತು
ನಿನ್ನ ನೋಡಲು
ಮುಂಜಾವು |
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
ಮತದಾರರಾಗಿ ನಾವೇನು ಮಾಡಬೇಕು
ನನ್ನ ಮದುವೆಗೆ ಬನ್ನಿ
ಮತ್ತೊಮ್ಮೆ ಮಗುವಾಗಬಾರದೇ !
ಬಾವತೀರ
' ಶಿವ ಅಶಿವ '
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)