ತಂದೆಗಿಂತ್ಲೂ ಜಾಸ್ತಿ ಸ್ನೇಹಿತರಾಗಿದ್ರು ನನ್ ಡ್ಯಾಡಿ
ಎಲ್ಲಿಗೆ ಹೋಗ್ಬಿಟ್ರಿ ಹೀಗೆ ನನ್ನೊಬ್ಬನ್ನೆ ಒಂಟಿ ಮಾಡಿ
ಲೇಟಾಗ್ ಬಂದಾಗ್ಲೆಲ್ಲಾ ಕಾಯ್ತಿದ್ರಿ ನಂಗೋಸ್ಕರ
ಇಷ್ಟು ಬೇಗ ಹೋಗೋ ಅಂತದ್ದು ಏನಿತ್ತು ನಿಮಗೆ ಅವಸರ
ನಾನ್ ಪರೀಕ್ಷೇಲಿ ಪಾಸಾಗಿದ್ದು ಹೇಳ್ಲಿ ಈಗ ಯಾರ್ ಹತ್ರ ?
ನನ್ನ ಪ್ರತಿಯೊಂದು ಸಾಧನೆಯೂ ಮುಡಿಪು ನಿಮಗೆ ಮಾತ್ರ
ಬಿಡದೆ ಮಾಡ್ತಿದ್ರಿ ಬೆಳಗ್ಗೆ ಸಂಜೆ ವ್ಯಾಯಾಮ ಅಂತ ವಾಕಿಂಗ್
ರಾಜನಂತೆ ಬಾಳಿದ್ರಿ ಆಗಿ ನಮಗೆಲ್ಲರಿಗೂ ಕಿಂಗ್
ಇನ್ನೂ ಮಾಸಿಲ್ಲ ನಿಮ್ಮ ೧೦೦ ವೋಲ್ಟೇಜ್ ಹಸನ್ಮುಖ
ನಮಗಿನ್ಯಾರು ದಿಕ್ಕು ಹಂಚಿಕೊಳ್ಳೋಕೆ ಸುಖ ದುಃಖ
ಅದೆಷ್ಟು ಬೈಕೊಂಡಿದೇನೋ ಆ ದೇವರನ್ನ
ಯಾಕೆ ಕರೆಸಿಕೊಂಡೆ ಇಷ್ಟು ಬೇಗ ಅಂತ ನಿನ್ನನ್ನ
ಎಲ್ಲಾದ್ರು ಇರಿ ನೀವು ಸುಖವಾಗಿ
ಅಂತ ಬೇಡಿಕೊಳ್ತೇನೆ ನಿಮ್ಮ ಸಲುವಾಗಿ
ಮುಂದಿನ ಜನ್ಮ ಅಂತಿದ್ರೆ, ಆಗಿ ನೀವೇ ನನಗೆ ಯಾವತ್ತಿಗೂ ಡ್ಯಾಡಿ
ಅಂತ ಪ್ರಾರ್ಥಿಸಿಕೊಳ್ತೇನೆ ಆ ದೇವ್ರ ಹತ್ರ ಕಾಡಿಬೇಡಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಚೆಲುವೆಯೇ ನಿನ್ನ ನೋಡಲೂ..
ಚಿತ್ರಗಳ ಮೇಲೆ ಕವನ, ಪದ್ಯ, ಚುಟುಕ...
ಒಂಟಿ ಮನದೊಳಗೊಂದು ಸುತ್ತು...
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)