ಅಷ್ಟೊತ್ತಿನಿಂದ ನೋಡ್ತಾನೆ ಇದೀನಿ, ನನ್ನತ್ತಲೇ ಇದೆ ಆಕೆಯ ದ್ರುಷ್ಟಿ
ಮನಸ್ಸೆಂತು, ಆಚರಿಸ್ಕೊಂಡ್ರೆ ಇವಳ್ ಜೊತೆಗೇನೆ, ಅರವತ್ತನೇ ನನ್ನ ಷಷ್ಟಿ! ಕಮಲದಂತಹ ಅಗಲವಾದ ಕಣ್ಣುಗಳು
ನೋಟದಲ್ಲೇ ಕೊಲ್ಲೋ ಅಂತಹ ಹುಬ್ಬುಗಳು,
ಆ ಬಸ್ಸಿನ ರಶ್ಶಿನಲ್ಲೂ ತಂಗಾಳಿಯೊಂದು ಸುಳಿದಂತೆ
ಬಿಸಿಲಿನ ಬೇಗೆಯಲ್ಲೂ ತಂಪಾಗಿಸೋ ಸೋನೇ ಮಳೆಯಂತೆ,
ಪದೇ ಪದೇ ನನ್ನತ್ತಲೇ ತಿರುತಿರುಗಿ ನೋಡುತಾಳೆ
ಮುಗುಳ್ನಗುವ ಮೋರೆಯಲಿ ಹುಸಿಮುನಿಸು ತೋರುತಾಳೆ
ಕನಸಲ್ಲವೋ ಸದ್ಯ ಇದು, ಜೋರಾಗಿ ಚಿವುಟಿಕೊಂಡೆ
ಎಲ್ಲಿಯಾದರು ಪರಿಚಯದವಳ ಎಂದ್ಯೋಚಿಸಿ ಕೆಡಿಸಿಕೊಂಡೆ ಮಂಡೆ
ಕಂಡಕ್ಟರ್ ಟಿಕೆಟ್ ಟಿಕೆಟ್ ಎಂದಾಗಲೆ, ಆಕೆ ನೋಟ ಬದಲಾಯ್ತು
ಕಟ್ಟಿಕೊಂಡ ಆಸೆಗಳೆಲ್ಲಾ ಒಂದೊಂದಾಗಿ ಬಟ್ಟ ಬಯಲಾಯ್ತು
ಓರೆಗಣ್ಣಿನ ಸುಂದರಿ, ಮತ್ತಾಕೆಯ ವಾರೆ ನೋಟ
ಮುಂದಿನ ಸೀಟಿನ ಮಗುವಿನತ್ತ ಇತ್ತೆಂಬುದು ಆಯ್ತು ದಿಟ !!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಡ್ಯಾಡಿ - ಎಲ್ಲಿಗೆ ಹೋಗ್ಬಿಟ್ಟೆ ?
ಚಿತ್ರಗಳ ಮೇಲೆ ಕವನ, ಪದ್ಯ, ಚುಟುಕ...
ಒಂಟಿ ಮನದೊಳಗೊಂದು ಸುತ್ತು...
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!