ಮೂಡುತಿದೆ ನೀರ
ಹನಿಗಳು ಕಣ್ಣಂಚಿನಲ್ಲಿಗ
ತೋರಲಾರದೆ ಮಳೆಯ
ಹನಿಗಳಲಿ ಒಂದಾಗಿರುವೆ ನಾನೀಗ
ಅಗಲುವುದು ಅಷ್ಟು ಸುಲಭವಲ್ಲ
ನಿನ್ನನ್ನಿಗ , ಹಲುಬಿಕೊಳ್ಳಬೇಕು
ನನ್ನ ಮನವ ನಾನೀಗ
ನೀ ನಕ್ಕು ಕೆನ್ನೆ ತಿವಿದಾಗಲೆಲ್ಲ
ನಾನೆಂದುಕೊಂಡೆ ನೀನೇ ನನ್ನ ನಲ್ಲೆ ಎಂದು
ಕೈಗೆ ಮದುವೆಯ ಆಮಂತ್ರಣವಿಟ್ಟು ಅಕ್ಷತೆ
ಹಾಕೆಂದಾಗಲೇ ತಿಳಿದಿದ್ದು ನೀ ನನ್ನ
ನಲ್ಲೆಯೇ ಆದರೆ ನಾ ಅಲ್ಲ ನಿನ್ನ ನಲ್ಲೆನೆಂದು
ಒಮ್ಮೆ ನಿನ್ನ ಮಗ್ಗುಲಲ್ಲಿ
ಮಲಗಿ ಜೋರಾಗಿ ಅತ್ತು ಕೆಳಬೇಕೆಂದೆನಿಸುತ್ತಿದೆ
ಅರಿಯಲಿಲ್ಲವೇಕೆ ನೀ ನನ್ನ ಮನ
ಮರುಕ್ಷಣವೇ ಅನಿಸಿದೆ ಅರಿತಿದ್ದೇನೆ ನಾ ಆಕೆಯ ಮನ?
ಮನಸಿನಾಳದಲಿ ಆಗಿದೆ ಗಾಯ
ಆದರೂ ನಗಲೆಬೇಕಿಗೆ ಬೇಕಿದೆ ನಾನೀಗ
ಹಾರೈಸಲೇ ಬೇಕಿದೆ ಕೂಡ
ಕಾರಣವಿಷ್ಟೇ ನಾ ನಲ್ಲದಿರಬಹುದು ನಿನ್ನ ನಲ್ಲ
ಆದರೆ ಎಂದೆಂದಿಗೂ ನೀನೇ ನನ್ನ ನಲ್ಲೆ .
ಪ್ರತಿಕ್ರಿಯೆ (2)