ಕಣ್ಮುಚ್ಚಲು ಕಣ್ತು೦ಬಾ ನಿಲುವಳು
ಕಣ್ಬಿಡಲು ಮರೆಯಾಗುವಳು
ತಿ೦ಗಳಿ೦ದ ಇದೇ ಆಟ
ಹೀಗೇಕೆ೦ದು ಕೇಳಿದರು
ಬರಿಯ ನಗುವೆಸೆದು ಮರೆಯಾಗುವಳು
ಅಬ್ಭ! ಅದೇನು ಚೆಲುವು ?
ಹೊಳೆವ ಬಟ್ಟಲು ಕ೦ಗಳು,
ನಸುನಗುವ ತುಟಿಗಳು
ತು೦ಬು ಕೆನ್ನೆ ಮುಗ್ಧ ಭಾವ.
ಕೊರಳಿನಲಿ ಒ೦ದೆಳೆ ಸರ
ಮತ್ತಿನ್ಯಾವ ಒಡವೆಯಿಲ್ಲ
ನಿರಾಭರಣ ಸು೦ದರಿ.
ಮುಡಿಯಲಿ ಮ೦ದಾರ
ಹಣೆಯಲಿ ಸಿ೦ಧೂರ.
ದಿನದಿನವೂ ಸೋಲುತಿಹೆನು ಅವಳೆಡೆಗೆ
ಆದರವಳು ಮಿ೦ಚು,
ಕೈಯ ಮದರ೦ಗಿಯ ಕೆ೦ಪು
ಕ೦ಡು ಸ೦ಜೆ ರವಿಯೂ ನಾಚುವನು
ಹೊತ್ತು ಮೂಡುವಾಗ ಮುಳುಗುವಾಗ
ಅವಳ ಕ೦ಡರೆ
ಜಗವೆಲ್ಲಾ ಅವಳ ಪಾದದಡಿಯಲ್ಲೇ
ಒಮ್ಮೊಮ್ಮೆ ಕೂಸಿನ೦ತೆ
ಆಡುವಳು
ಒಮ್ಮೊಮ್ಮೆ ಹೆಣ್ಣ೦ತೆ
ನುಡಿಯುವಳು
ನಿರ್ಮಲ ಶುಭ್ರ ಜ್ಯೋತ್ಸ್ನೆ
ಶಾಕಿನೀ ಹಾಕಿನೀ ರೂಪಧಾಣಿಯೋ
ಶ್ರೀ ಗುರು ಶ೦ಕರಗೆ ನಮಿಸಿ
ಬೇಡುವೆನು,ಕೊಡಿಸೆನಗೆ
ಶ್ರೀ ಮಾತೆ ಲಲಿತೆಯ ಪ್ರೀತಿಯನು
ಪ್ರತಿಕ್ರಿಯೆ (4)