ನಾವು ಬೆಂಗಳೂರಿಗೆ ಹೋಗಿದ್ದಾಗಿನ ಘಟನೆ.ನಿಮ್ಮೊಡನೆ ಹಂಚಿಕೊಳ್ಳೋಣವೆನಿಸಿತು.
ನಾವು ಮಾಗಡಿ ರಸ್ತೆಯಲ್ಲಿರುವ ನಮ್ಮ ನೆಂಟರೊಬ್ಬರ ಮನೆಯಲ್ಲಿ ಫಂಕ್ಷನ್ ಇದ್ದುದರಿಂದ ಮೈಸೂರಿನಿಂದ ಸೀದಾ ಅಲ್ಲಿಗೇ ಹೋದೆವು. ದೊಡ್ಡ ಫ್ಲಾಟ್ ನಲ್ಲಿ ಮನೆಯಿತ್ತು. ಹೋದಾಗ ಸುಮಾರು 5, 5-30 ಇರಬಹುದು. ಆಗಲೇ ಕಟ್ಟೆಯ ಮೇಲೆಲ್ಲಾ ಹರಟೆ ಹೊಡೆಯಲು, ಎಲ್ಲಾ ಮನೆಯವರೂ ಸೇರಿದ್ದರು. ಸುಮಾರು 30 ಅಡಿ ಉದ್ದ, 3-4 ಅಡಿ ಎತ್ತರದ ಕಟ್ಟೆ ಇರಬಹುದು ಅಂದ್ಕೋತೀನಿ. ದೊಡ್ಡ ಗೇಟಿನ ಆ ಪಕ್ಕ ಈ ಪಕ್ಕ ಇತ್ತು. ಸಾಯಂಕಾಲದ ಕೆಲಸ ಮುಗಿಸಿ ಗಂಡಸರು ಹೆಂಗಸರು ಒಬ್ಬೊಬ್ಬರೇ ಬಂದು ಕುಳಿತು ಹರಟಲಾರಂಭಿಸಿದರು. ಇದು ನೋಡಿ ನನಗೆ ಖುಷಿಯಾಯಿತು. ನಮ್ಮೂರಲ್ಲಿ ಪಕ್ಕದಲ್ಲಿ ಯಾರಿದ್ದಾರೆಂಬುದೇ ತಿಳಿಯುವುದಿಲ್ಲ. ಮಾತು ಬಹಳ ಕಡಿಮೆ.
ರಾತ್ರಿ ತಡವಾಗಿ ಫಂಕ್ಷನ್ ಮುಗಿಯಿತು. ಹೊರಬಂದಾಗ 10ರ ಸುಮಾರು ಇರಬಹುದು. ತದವಾಯಿತೆಂದು ಬೇಗ ಬೇಗ ಹೊರಬಂದೆವು. ಗೇಟಿನ ಹತ್ತಿರ ಬಂದಾಗ ಎಲ್ಲರೂ ಹರಟೆ ಮುಗಿಸಿ ಅವರವರ ಮನೆ ಸೇರಿದ್ದರು. ಮತ್ಯಾವುದೋ ಬೇರೆ ಬಳಗ ಬಂದಲ್ಲಿ ಕುಳಿತಿದ್ದರು. ಹತ್ತಿರ ಬಂದು ನೋಡಿದಾಗ 7-8 ನಾಯಿಗಳು ಕೆಂಚು ಬಣ್ಣ ದೊಡ್ಡ ಗಾತ್ರದವು ಸಾಲಾಗಿ ಕಟ್ಟೆ ಮೇಲೆ ಕುಳಿತಿದ್ದವು. ನಾವು ನಿಮಗೇನು ಕಮ್ಮಿ ಅಂತಿತ್ತು ಅವುಗಳ ಠೀವಿ. ಅವರವರಲ್ಲೇ ಏನು ಮಾತಾಡಿ ಕೊಂಡವೋ ತಿಳಿಯಲಿಲ್ಲ. ಇದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ ಮನಸಾರೆ ನಕ್ಕೆ. ನಿಮಗೂ ನಗು ಬಂದರೆ ನಕ್ಕುಬಿಡಿ.
ಹಾಸ್ಯ
ಸೀತ ಆರ್. ಮೊರಬ್
ಪ್ರತಿಕ್ರಿಯೆ (4)