ಪಾಪ್ ಮಾಂತ್ರಿಕ, ಕಿಂಗ್ ಆಫ್ ಪಾಪ್ ಎಂದೇ ಖ್ಯಾತಿ ಪಡೆದ ___LINK_OPEN_href="http://en.wikipedia.org/wiki/Michael_Jackson"___ಮೈಕಲ್ ಜಾಕ್ಸನ್ ತಮ್ಮ ೫೦ ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ಮಧ್ಯಾಹ್ನ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಆಸ್ಪತ್ರೆ ಸೇರಿದ್ದಾಗಿ ವರದಿಯಾಗಿದ್ದು ಟ್ವಿಟರ್ ಇತ್ಯಾದಿಗಳ ಮೂಲಕ ಸಂಗೀತ ಪ್ರೇಮಿಗಳಿಗೆ ತಿಳಿಯಿತು. ನಂತರ ಈವಿಷಯವನ್ನು ಸಿ.ಬಿ.ಎಸ್ ನ್ಯೂಸ್, ಲಾಸ್ ಆಂಜಲ್ಸಿನ ಟೈಮ್ಸ್ ಇತ್ಯಾದಿ ಧೃಡಪಡಿಸಿವೆ. 

ಲಾಸ್ ಆಂಜಲ್ಸಿನ UCLA ಆಸ್ಪತ್ರೆಗೆ ೧೨:೨೧ ಕ್ಕೆ ೯೧೧ ಕಾಲ್ ಮಾಡಿ ಕರೆದೊಯ್ಯಲಾಯ್ತು. ಹೋಂಬ್ಲಿ ಹಿಲ್ಸ್ ನ ಅವರ ಮನೆಗೆ ತೆರೆಳಿದ ವೈದ್ಯರು ಕೊಟ್ಟ ಸಿ.ಪಿ.ಆರ್ ಚಿಕಿತ್ಸೆ ತರುವಾಯ ಆಸ್ವತ್ರೆ ಸೇರಿದ ಮೈಕಲ್ ಈ ಹೊತ್ತಿಗಾಗಲೇ ಕೋಮಾದಲ್ಲಿದ್ದರು. ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ದೊರೆತಿಲ್ಲ. 

ಬಾಲ ಕಲಾವಿದನಾಗಿ ರಂಗ ಪ್ರವೇಶಿಸಿದ ಮೈಕಲ್ ತನ್ನ ಸಂಗೀತದಿಂದಾಗಿ ೧೯೭೦ರ ಹೊತ್ತಿಗಾಗಲೇ ವಿಶ್ವವನ್ನೇ ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ್ದರು. ಈ ವರ್ಷ ಮತ್ತೆ ತಮ್ಮ ಸಂಗೀತದೊಂದಿಗೆ ರಂಗ ಪ್ರವೇಶಿಸುವ ಇರಾದೆಯೂ ಅವರಿಗೆ ಇತ್ತು.

Michael Joseph Jackson, Jr., Paris Michael Katherine Jackson and Prince
"Blanket" Michael Jackson II ಈ ಮೂರು ಮಕ್ಕಳನ್ನು ಮೈಕಲ್ ಈಗ ಅಗಲಿದ್ದಾರೆ..

ಇಂಗ್ಲೀಷ್ ಹಾಡುಗಳನ್ನು ಕೇಳಲಿಕ್ಕೆ ರೂಡಿಸಿಕೊಂಡಾಗಿನಿಂದಲೂ ಮೈಕಲ್ ಜಾಕ್ಸನ್ ರ ಕೆಲವೊಂದು ಹಾಡುಗಳು ಅವರ ನೃತ್ಯ ಪ್ರದರ್ಶನ ನನ್ನ ಮೈನವಿರೇಳಿಸಿದ್ದವು. ಅವುಗಳಲ್ಲಿ ಕೆಲವೊಂದು ಇಲ್ಲಿವೆ.

ಅರ್ಥ್ ಸಾಂಗ್:

2) ಬಿಲ್ಲಿ ಜೀನ್
3) ಸ್ಮೂತ್ ಕ್ರಿಮಿನಲ್
ಇತ್ತೀಚೆಗೆ ಕೋರ್ಟು ಕಟ್ಟಲೆ ಇತ್ಯಾದಿ ಏನೆಲ್ಲಾ ವಿಷಯಗಳಿಂದ ಮೈಕಲ್ ಜಾಕ್ಸನ್ ವಿಶ್ವದ ಮಾತಾಗಿದ್ದರೂ, ಪಾಪ್ ಲೋಕದಲ್ಲಿ ಅವರು ಯಾವಾಗಲೂ ಚಿರಾಯು...
ಚಿತ್ರ: http://www.allmichaeljackson.com/