ಮೊದಲೇ ಹೇಳಿದಹಾಗೆ ನನಗು ಅಪ್ಪನಿಗು ಚಿಕ್ಕಂದಿನಿಂದಲು ಎಲ್ಲಿಲ್ಲದ ನಂಟು.ಅಪ್ಪ ತಮ್ಮ ಶಾಲಾ ಕಲೇಜಿನ ದಿನಗಳಲ್ಲಿ ಹಾಡು ನಾಟಕಗಳಲ್ಲಿ ಮುಂದಿರುತ್ತಿದ್ದರಂತೆ.ನಾನು ಮಾತಾಡಲು ಕಲಿತ ಮೇಲೆ ಬಿಡುವಿನ ಸಮಯದಲ್ಲಿ ಅಪ್ಪನಿಗು ನನಗು ಹಾಡುವುದೇ ಕೆಲಸ.ಅಪ್ಪ ಹೇಳಿಕೊಟ್ಟ ಹಾಡುಗಳಲ್ಲಿ ನಾನು ಯಾವಾಗಲು ಗುನುಗುತಿದ್ದದ್ದು "ನಿನ್ನಂಥ ಅಪ್ಪಾ ಇಲ್ಲ....ನಿನ್ನಂಥ ಮಗಳು ಇಲ್ಲಾ...ನೀನೆ ನನ್ನ ಜೀವ" .ಹೀಗೆ ಅಪ್ಪ ಕಲಿಸಿದ ಹಾಡುಗಳು ಒಂದೆರೆಡಲ್ಲ .ಎಶ್ಟೊ ದಿನ ನಾನು ಅಪ್ಪ ಹಾಡುತ್ತಾ ಕುಣಿಯುತ್ತ ಊಟ ತಿಂಡಿಗಳ ಮರೆತಿದ್ದೂ ಉಂಟು.ಅದರಲ್ಲು ಅಪ್ಪ ಹೇಳುತಿದ್ದ ಭಾವಗೀತೆಗಳು ಇಂದಿಗು ಎಂದಿಗು ಮಧುರ, ಸುಮಧುರ.ಇಂದು ನಾ ಹಾಡುವುದ ಕೇಳಲು ಇಲ್ಲಿ ಅಪ್ಪನಿಲ್ಲ ,ಅವರು ಹೇಳಿಕೊಡುವ ಹಾಡ ಕಲಿಯಲು ನಾನು ಅವರ ಬಳಿ ಇಲ್ಲ .ಜೀವನದ ಬಂಡಿಯನು ನೂಕುವ ಭರದಲ್ಲಿ ನಾವಿಬ್ಬರು ಅದೆಶ್ಟೂ ಸಾವಿರ ಕಿಲೂಮೀಟರ್ಗಳ್ಶ್ಟು ಅಂತರದಲ್ಲಿ ಬದುಕುತ್ತಿದ್ದೇವೆ.ಅಲ್ಲಿ ಅವರು ದಿನದ ಬಹುತೇಕ ಸಮಯ ಗಣಕ ಯಂತ್ರದ ಮುಂದೆ ಕೂತು ತಮ್ಮ ಮನಸನ್ನು ಇಲ್ಲಿ ಹರಿಬಿಡುತಿದ್ದರೆ,ಇಲ್ಲಿ ಸದಾ ಅವರನ್ನು ನೆನೆದು ನನ್ನಶ್ಟಕ್ಕೆ ನಾನೆ ಹಾಡುತ್ತ ಕಾಲ ಹೂಡುತಿದ್ದೇನೆ.ಈಗ ಅಪ್ಪನಿಗಾಗಿ ನಾ ಹಡುವುದು," ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕೆ ನಿನ್ನನ್ನು , ಯಾವ ಬ್ರುಂದಾವನವು ಚಾಚಿತೊ ತನ್ನ ಮಿಂಚಿನ ಕೈಯನು ".

ನಮ್ಮಿಂದ ದೂರವಿದ್ದರೂ,ವರುಶಕ್ಕೊಮ್ಮೆ ನಮಗಾಗಿ ಗಗನದಿ ಹಕ್ಕಿಯಂತೆ ಹಾರಿ ಬರುವ ನಮ್ಮ ಸಂಸಾರದ ನಾವಿಕನಿಗೆ ನನ್ನ ನಮನ.