ಕಣ್ತೆರದೊಡನೆ ತಬ್ಬಿ ಆಶ್ರಯಿಸಿದವಳು
ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು
ನಗುತ್ತ ನಾ ಕೇಕೆ ಹಾಕುವಾಗ ನಲಿದವಳು
ನನ್ನ ಹೆತ್ತವಳು.

ತೆವಳುತ್ತ ಬಂದಾಗ "ಬಾ"ಎಂದು ಕೈ ಚಾಚಿದಳು
ತೊದಲುತ್ತ ನುಡಿದಾಗ ತಿದ್ದಿ ಮಾತು ಕಲಿಸಿದವಳು
ಉಣ್ಣಲು ಅತ್ತಾಗ ಚನ್ದದಾ ಕಥೆಕಟ್ಟಿ ಹಸಿವ ತೊರೆಸಿದವಳು
ನನ್ನ ಹೆತ್ತವಳು

ಕಲಿಕೆಗೆ ಸ್ಪೂರ್ತಿಯಾಗಿಕಲಿಯಲು ಪ್ರೇರೇಪಿಸಿದವಳು
ಕಲಿತೊಡನೆ ಮೆಚ್ಚಿ ಬಿರುದುಗಳ ಮಳೆ ಸುರಿಸಿದವಳು
ಕುಣಿಯೆಂದು ಹೇಳಲು ನಾ ಕುಣಿಯದಿದ್ದಗ ತಾನು ಜೊತೆಯಾಗಿ ಕುಣಿದವಳು.

ಯೆಂದೂ ಬಾರದ ಜ್ವರ ಬಂದಾಗ ಕಂಬನಿಯಿಟ್ಟು ಮದ್ದು ನೀಡಿದವಳು
ನೂರೂರ ಚಂದಮಾಡಿ ನೀನೇ ಚಂದವೆಂದು ಹೊಗಳಿದವಳು
ತಪ್ಪೆಂದು ತಿಳಿದು ತಪ್ಪಾಗಿ ನಡೆದಾಗ ಕೊಂಕಾಡಿ ಕೆಣಕಿ ರೇಗಿದವಳು
ಮತ್ತೆ ಯವ್ವನದಿ ಇದು ಸಹಜವೆಂದು ತನ್ನ ಭುಜಗಳಲ್ಲಿ ತಲೆಯಿಡಿಸಿ ಮುದ್ದಿಸಿದವಳು
ಎಂದೆಂದೂ ಸಿಗದ ಮಮತೆಯ ನೀಡಿದವಳು.

ಎಲ್ಲವೂ ಮುಗಿಯಿತು ಇನ್ನು ನಿನ್ನದೇ ಹೊಣೆಯೆಂದು ಕೈ ಸೋತವಳು
ಅದೇಕೊ ಅಂದು ತನ್ನಲ್ಲಿಯೇ ಇರೆಂದು ಹಟಮಾಡಿದಳು
ಬರುವೆನೆಂದು ನಾ ಹೊರಟಾಗ ಮನಸಾರೆ ಹರಸಿದಳು
ನನ್ನ ಹೆತ್ತವಳು

ಅದೇಕೊ ಇಂದು ಎಲ್ಲರಿಂದ ಮರೆಯಾಗಿರುವಳು
ಕಾಣದ ಊರಿಗೆ ಅತಿಥಿಯಾಗಿ ಪ್ರಯಾಣ ಬೆಳೆಸಿರುವಳು
ತನ್ನೂರಿಗೆ ತನ್ನವರನ್ನು ಬಿಟ್ಟು ತಾನೊಬ್ಬಳ್ಳೇ ಹೋದಳು
ಕೊನೆಗೆರಡು ಮಾತನ್ನೋ ಆಡದೆ ಕಣ್ಮರೆಯಾದಳು
ನನ್ನ ಹೆತ್ತವಳು.