ಸಂಪದವೇ ನನ್ನ ಸಂಪದವೇ
ಸಂಪದವೆಂಬ ಸಂತಸವೇ
ನಿನ್ನನು ನೋಡದೆ ದಿನವಿರಲಾರೆ
ನಿನ್ನೊಡನಾಡದೆ ನಾನಿರಲಾರೆ
ಬಗೆ ಬಗೆ ರೀತಿಯ ಲೇಖನ ಚೆಂದ
ಬ್ಲಾಗುಗಳಿಂದ ಬಹಳಾನಂದ
ಹರಟೆಯೆ ಆಗಲಿ ಜಗಳವೆ ಆಗಲಿ
ಕವಿಗಳ ಸವಿಯ ಕವನವೆ ಆಗಲಿ
ತತ್ತ್ವಜ್ಞಾನ ಮತ್ತು ವಿಜ್ಞಾನ
ನಿನ್ನಲಿ ಇಹುದು ಎರಡೂ ಸಮಾನ
ವಿಚಾರಕ್ರಾಂತಿಗೆ ದಾರಿಯತೋರಿ
ಅಧ್ಯಾತ್ಮದಲಿ ಮಾಡಿದೆ ಮೋಡಿ
"ಮಾರುಲಿವೀರರ" ಮೆಚ್ಚಿನ ತಾಣ
ಪ್ರತಿಕ್ರಿಯೆಗಳು ಬಿಟ್ಟಂತೆ ಬಾಣ
ದಾಸರಪದಗಳ ವಚನದ ಬೀಡು
ಕೆಲವರು ಬರೆವರು ದಿನವೂ ಹಾಡು
ಕನ್ನಡ ನುಡಿವರ ನೆಚ್ಚಿನ ತಾಣ
ಸಂಗೀತ ಸಾಹಿತ್ಯರಸದೌತಣ
ಹಳೆಯಬೇರು ಹೊಸದಾದ ಚಿಗುರು
ನೋಡಿರಿ ಸಂಪದ ಜಾಲದ ಸೊಗಸು
ಜೈ ಜೈ ಸಂಪದ ಜಾಲ ತಾಣ
ನೀನೇ ನನ್ನಯ ಪರಮ ಪ್ರಾಣ
ಪ್ರತಿಕ್ರಿಯೆ (5)