ನನ್ನ ಬಹಳ ಕಾಡಿದ ಶರೀಫರ ಎರೆಡು ಹಾಡುಗಳನ್ನು ಇಲ್ಲಿ ಹಾಕಿದ್ದೇನೆ :
1)
"ನಾಯಿಬಂದಾವೋ ಬೆನ್ನತ್ತಿ ನಾರಾಯಣ
ನಾಯಿಬಂದಾವೋ ಬೆನ್ನತ್ತಿ
ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ
ನಾನ ನಂದ ತಿಳಿಯದಂತ ಶ್ವಾನ ನಂದದೊಳು ನಿಂದೆ
ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ
ದಾರಿ ಹಿಡಿದೂ ಬರುತಿರಲು ವಾರಿಗಿ ನಾಯಿ
ನೂರಾರು ಕೂಡಿರಲು ಯಾರಿಗೆ ಹೇಳಲಿ ನಮ್ಮವರಾರು
ಸಾರಿ ಕೇಳುವರಿಲ್ಲದಾಯಿತು
ಗುರ್ ಗುರ್ ಗುಟ್ಟುತ ಮೇಲೆ ಬರಲು
ಕರವ ಮುಗಿದು ಸರಿಯುವಂತ
ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ
ಮೂರೂ ಲೋಕದೊಳಿರಲು ಆ ಸರ್ವಕೆ
ಹಸಿದ ಹೊತ್ತಿಗೆ ನೀಡಲು ವಸುಧೆ ಒಳಗೆ
ಶಿಶುನಾಳದಿಶನ ಬಸವರಾಜನ ರಸಿಕ ನಾಯಿ
ನುಸುಕು ಮಾಯೆ ತೆಗೆದು ಬಿಸಿಯ ಹಾಲು
ಸೋಸಿ ಕುಡಿಯುವಂತ
ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ"
ಮತ್ತು
2)
"ಬಾಯಿಲೆ ಬ್ರಹ್ಮವ ಬೊಗಳಿದರೇನು
ನಾಯಿಯಂತೆ ಕೊಳೆ ಮೆಯುವೆ ಮನಸೇ
ಕಾಯ ಜೀವದೊಳು ನ್ಯಾಯವ ಹಿಡಿಯದೆ
ಮಾಯಾದೊಳಗೆ ಮುಳುಗೆಳುವಿ ಮನಸೇ
ಪರ ಸತಿ ಪರ ಧನ ಪರ ನಿಂದೆಗೆ
ಮನ ಹರಿಸುವಿ ಪಿರಿ ಪಿರಿ ಸಾಗಲೋ ಮನಸೇ
ಭಾರಿ ಶಾಸ್ತ್ರಗಳ ಪಠಿಸಿ ಗಿಳಿಯ ತರ
ಸೇರಿ ಪಂಜರವ ತೊಲಳುವಿ ಮನಸೇ
ಹೊಲಸಿನ ಸಿಂಬಳ ಸೇರಿಪ ನೊಣದಂತೆ
ತಿಳಿಯದೆ ವಿಷಯಕೆ ಬಿಳುವಿ ಮನಸೇ
ಶಿಶುನಾಳ ದಿಶನ ಕಾಲಿಗೆ ಬಿದ್ದರೆ
ವ್ಯಸನ ಹರಸಿ ಕಾಯ್ವ ಅರಿಯಲೋ ಮನಸೇ
ಬಾಯಿಲೆ ಬ್ರಹ್ಮವ ಬೊಗಳಿದರೇನು
ನಾಯಿಯಂತೆ ಕೊಳೆ ಮೆಯುವೆ ಮನಸೇ
ಕಾಯ ಜೀವದೊಳು ನ್ಯಾಯವ ಹಿಡಿಯದೆ
ಮಾಯಾದೊಳಗೆ ಮುಳುಗೆಳುವಿ ಮನಸೇ "
ಎರೆಡು ಹಾಡನ್ನು ನಾನು ಅಲಿಸಿ ಬರೆದಿದ್ದುದ್ದರಿಂದ ಯಾವುದಾದರು ಪದ ತಪ್ಪಿದ್ದಲ್ಲಿ ಕ್ಷಮೆ ಇರಲಿ , ಹಾಗೆ ಸರಿ ಪದ ತಿಳಿಸಿ
ಇಂತಿ ವಿನಯ :)
ಪ್ರತಿಕ್ರಿಯೆ (2)