
ಕನ್ನಡಿಗರಿಗೆ ಮಾಹಿತಿ ಕೊಡ್ತೀವಿ, ವಾರ್ತೆ ತಲುಪಿಸ್ತೀವಿ, ಕನ್ನಡದಲ್ಲೇ ಮನರಂಜನೆ ನೀಡ್ತೀವಿ, ಹಾಗೆ ಹೀಗೆ, ನಾವು ಮಿಕ್ಕ ಎಲ್ಲ ಕನ್ನಡದ ಟೀ.ವಿ ವಾಹಿನಿಗಳಿಗಿಂತ ಉತ್ತಮ ಮನರಂಜನೆ ಕೊಡ್ತೀವಿ ಅಂತೆಲ್ಲಾ ಕೇಳಿರೋದು ಎಲ್ರಿಗೂ ನೆನಪಿರಬಹುದು.
ಹೀಗೆಲ್ಲಾ ಸಾರ್ವಜನಿಕವಾಗಿ ಘೋಷಣೆ ಹೊರಡಿಸಿ ದಿನ ಕಳೆದಂತೆ ಇದೀಗ ಒಂದೆರಡು ವಾಹಿನಿಗಳು ಈ ಕನ್ನಡ ವಾಹಿನಿಗಳಲ್ಲಿ ಕನ್ನಡೇತರ ಭಾಷೆಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಶುರು ಮಾಡಿಕೊಂಡಿವೆ.
ಪ್ರತಿಯೊಬ್ಬ ಕನ್ನಡಿಗನಿಗೂ ಈ ಸಂದರ್ಭದಲ್ಲಿ ಏಳುತ್ತಿರುವ ಪ್ರಶ್ನೆ : "ಯಾಕೋ!?" ಈ ಪ್ರಶ್ನೆಯನ್ನು ಯೋಚನೆ ಮಾಡುವುದಷ್ಟೇ ಅಲ್ಲದೆ ಈ ವಾಹಿನಿ ನಡೆಸುವವರಿಗೆ ತಿಳಿಸಿಕೊಡಲೂ ಬೇಕು. ಇವರ ಮನರಂಜನಾ ವಸ್ತುವನ್ನು ನೋಡುತ್ತಿರುವ ನಾವು ನಮ್ಮ ಅನಿಸಿಕೆಗಳನ್ನು ಈ ರೀತಿಯ ಪ್ರಶ್ನೆಗಳ ರೂಪದಲ್ಲಿ ಮುಂದಿಡಬಹುದು:
೧. ಕನ್ನಡದಲ್ಲಿ ಒಂದು ವಾಹಿನಿ ನಡೆಸುವೆವು ಎಂದು ಹೇಳಿಕೊಂಡು ಬಂದಿರುವಾಗ ಅದರಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯ ಮನರಂಜನಾ ವಸ್ತು ಪ್ರಸಾರ ಮಾಡುವ ಅವಶ್ಯಕತೆಯಾದರೂ ಏನಿದೆ?
೨. ಈ ಬೇರೆ ಬೇರೆ ಭಾಷೆಗಳನ್ನು ಆಧರಿಸುವ ಕಾರ್ಯಕ್ರಮಗಳನ್ನು ನೀವು ಮೂಡಿಸುತ್ತಿರುವುದಾದರೂ ಯಾರಿಗಾಗಿ? ಯಾವ ಭಾಷೆಯ ಜನರಿಗಾಗಿ?
೩. ಉದಾಹರಣೆಗೆ ತೆಲುಗು ಅಥವಾ ಹಿಂದಿ ಭಾಷೆಯ(ಲ್ಲಿ) ಮನರಂಜನೆ ಪಡೆಯಲು ತೆಲುಗಿನ ಅಥವಾ ಹಿಂದಿಯ ವಾಹಿನಿಗಳನ್ನು ಬಿಟ್ಟು ಕನ್ನಡದ ವಾಹಿನಿಯನ್ನು ನೋಡಲು ಯಾವ ಆಸಾಮಿ ತಾನೆ ಇಚ್ಚಿಸುವನು?
೪. ಕನ್ನಡಿಗರಿಗಾಗಿ ಅಂತ ಶುರು ಮಾಡಿರುವ ಈ ವಾಹಿನಿಗಳ ಪ್ರೈಮ್-ಟೈಮ್ ಗಳಲ್ಲಿಯೇ ಹೀಗೆ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದನ್ನು ನೋಡಿದರೆ ಇವರಿಗೆ ಕನ್ನಡ ಟೀ.ವಿ ವಾಹಿನಿ ನಡೆಸಲೇಕೆ, ಮನರಂಜನೆ ನೀಡಲೇ ತಿಳಿದಿಲ್ಲ.
೫. ಇದರಿಂದ ಇವರದ್ದು ಎಷ್ಟು ಕೀಳು ಮಟ್ಟದ ಕನ್ನಡದ ವಾಹಿನಿ ಎಂಬ ಸಂದೇಶ ಮಾರುಕಟ್ಟೆಯಲ್ಲಿ ಹೋಗುವುದು ಎಂದು ಇವರಿಗೆ ತಿಳಿದಿಲ್ಲವೇ?
೬. ಅಥವಾ ಹೀಗೆ ಬೇರೆ ಭಾಷೆಯಾಧಾರಿತ ಕಾರ್ಯಕ್ರಮ ಪ್ರಸಾರ ಮಾಡುವುದರಿಂದ ಮುಂದೆ ಜನರು ಬೇಸತ್ತು ಇವರ ವಾಹಿನಿಯನ್ನೇ ಬಹಿಷ್ಕಾರ ಮಾಡಿದಾಗ ಇವರ ಆದಾಯದ ಮೇಲೆ ಎಂತಹ ಪೆಟ್ಟು ಬೀಳಬಹುದು ಲೆಕ್ಕ ಹಾಕಿದ್ದಾರಾ?
ಇವೆಲ್ಲಾ ಯೋಚನೆ ಮಾಡದೇನೇ ಈ ರೀತಿ ಕಾರ್ಯಕ್ರಮ ಶುರು ಮಾಡಿರುವುದು ಕಂಡರೆ ಇವರ ವಾಹಿನಿಯನ್ನ ಗ್ರಾಹಕ ಅಂತೂ ಕಾಪಾಡೊಲ್ಲ, ಇವರ ಇಷ್ಟ ದೈವಗಳೇ ಬರಬೇಕು. ಅದಂತೂ ಸಾಧ್ಯವಿಲ್ಲ. ಹಾಗಿದ್ರೆ ಇವರೇ ಬದಲಾಗ್ಬೇಕು - ಇಲ್ದೇ ಹೋದ್ರೆ ಇವರ ಅಂಗಡಿ ಮುಚ್ಕೊಂಡು ಹೋಗೋದು ಕಚಿತ ಸಿವ!
ಯಾವ್ಯಾವ ಟೀ.ವಿ ವಾಹಿನಿಯಲ್ಲಿ ಏನೇನು ಕನ್ನಡೇತರ ಕಾರ್ಯಕ್ರಮ ಎಂದು ಇಲ್ಲಿ ತಿಳಿಯಿರಿ:
ವಾಹಿನಿ: ಟಿವಿ9, ಕಾರ್ಯಕ್ರಮ: ಬಾಲಿವುಡ್ ಬಾತ್, ಫಿಲ್ಮಿ ಫ೦ಡಾ; ತೊ೦ದರೆ: ಹಿ೦ದಿ, ತೆಲುಗು ತಮಿಳು ಮತ್ತು ಇ೦ಗ್ಲೀಷ್ ಭಾಷೆಗಳ ಸಿನೆಮಾ ಸಮೀಕ್ಷೆಗಳು
ವಾಹಿನಿ: ಈ ಟಿವಿ, ಕಾರ್ಯಕ್ರಮ: ಎದೆ ತು೦ಬಿ ಹಾಡುವೆನು; ತೊ೦ದರೆ: ಹಿ೦ದೂಸ್ಥಾನಿ ಹಾಡಿನ ಸ್ಪರ್ಧೆಯಲ್ಲಿ ಹಿ೦ದಿ ಹಾಡುಗಳು, ಹಿ೦ದಿ ತೀರ್ಪುಗಾರರು
ವಾಹಿನಿ: ಈ ಟಿವಿ, ಕಾರ್ಯಕ್ರಮ: ಹಾಕು ಹೆಜ್ಜೆ ಹಾಕು; ತೊ೦ದರೆ: ಹಿ೦ದಿ ಹಾಡುಗಳಿಗೆ ಕುಣಿತ
ವಾಹಿನಿ: ಝೀ ಕನ್ನಡ, ಕಾರ್ಯಕ್ರಮ: ಕುಣಿಯೋಣು ಬಾರಾ; ತೊ೦ದರೆ: ಹಿ೦ದಿ ಹಾಡುಗಳಿಗೆ ಕುಣಿತ
ವಾಹಿನಿ: ಕಸ್ತೂರಿ, ಕಾರ್ಯಕ್ರಮ: ಮಕ್ಕಳ ನಾಟ್ಯ ಸ್ಪರ್ಧೆ; ತೊ೦ದರೆ: ಹಿ೦ದಿ ಹಾಡುಗಳಿಗೆ ಕುಣಿತ
ವಾಹಿನಿ: ಸುವರ್ಣ, ಕಾರ್ಯಕ್ರಮ: ಸ್ಟಾರ್ ಸಿ೦ಗರ್, ಸೈ; ತೊ೦ದರೆ: ಹಿ೦ದಿ ಹಾಡುಗಳಿಗೆ ಪ್ರೋತ್ಸಾಹ
ಯಾವ್ಯಾವ ವಾಹಿನಿಗೆ ಹೇಗೆ-ಹೇಗೆ, ಎಲ್ಲಿಗೆ ಮಿಂಚೆ (email) ಮೂಲಕ ದೂರು ಸಲ್ಲಿಸಬಹುದು ಕೆಳಗೆ ನೋಡಿ:
TV 9: [email protected]
Kasturi: http://kasturitv.blogspot.com/search/label/FORUM
Suvarna: http://www.asianetglobal.com/report.aspx?Cat=Gen
ETV: ___LINK_OPEN_href="mailto:[email protected]" target="_blank"[email protected] & ___LINK_OPEN_href="mailto:[email protected]" target="_blank"[email protected]
ZEE: [email protected], [email protected], [email protected]
--
ಜಾಗ್ರುತ ಗ್ರಾಹಕರು/jaagruta graahakaru
ಪ್ರತಿಕ್ರಿಯೆ (1)