ಪ್ರಕೃತಿ ವಿಸ್ಮಯ !
ಚಿತ್ರದಲ್ಲಿರುವ ನಿಂಬೆ ಹಣ್ಣು ನೋಡಿ ನಿಮಗೇನನಿಸುತ್ತೆ?
ನನಗೆ ಅನಿಸಿದ್ದು.............
ಆ..ಆ..ಆ..ಆ..ಆಡಿದನೋ ಅದ್ಭುತದಿಂದಲಿ, ಕಾಳಿಂಗನ .................
ಈ ನಿಂಬೆ ಹಣ್ಣು ಕಾಳಿಂಗನ ಹೆಡೆಯರೂಪದಲ್ಲಿ ಕುಪರ್ಟೀನೋ ಮನೆಯೊಂದರಲ್ಲಿ ಮರದಮೇಲೆ ಬಿಟ್ಟಿತ್ತು. ನನ್ನ ಸ್ನೇಹಿತೆ ನನಗೆ ಕೊಟ್ಟ ನಿಂಬೆ ಹಣ್ಣುಗಳ ಮಧ್ಯೆ ಇದೂ ಒಂದಾಗಿತ್ತು. ಇದನ್ನು ಹೆಚ್ಚುವ ಮೊದಲು ಚಿತ್ರ ತೆಗೆಯಬೇಕೆನಿಸಿತು. ಚಿತ್ರ ತೆಗೆದಮೇಲೆ ಶೀರ್ಷಿಕೆ ಕೊಡಬೇಕೆನಿಸಿ, ಕಡೆಗೆ ಒಂದು ಬ್ಲಾಗ್ ಬರೆಸಿತು. ಹಾಗೇ ಪುರಂದರ ದಾಸರ ಕೃತಿ ಮನದಲ್ಲಿ ತೇಲಿ ಬಂತು. ಪೂರ್ಣ ಸಾಹಿತ್ಯ ತಿಳಿದವರು ಸೇರಿಸಿ .....ಆಆಆಆಆಡಿದನೋ ರಂಗ............
ಕೊಸರು: ಈ ನಿಂಬೆ ಹಣ್ಣಿನಂತ ಕಾಳಿಂಗನ ಹೆಡೆ....., ಅಲ್ಲ,.....
ಈ ಕಾಳಿಂಗನ ಹೆಡೆಯಂತ ನಿಂಬೆ ಹಣ್ಣು ನೋಡು !!!!!!!
ಪ್ರತಿಕ್ರಿಯೆ (2)