ಉಬುಂಟು 9.10 ಕಾರ್ಮಿಕ್ ಕೋಅಲಾ ಆವೃತ್ತಿಯನ್ನು ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಚಯಿಸೋಣವೆಂದು ಕಾರ್ಯಕ್ರಮ ಹಾಕಿಕೊಂಡೆವು. ಇಡಿ ದಿನದ ಕಾರ್ಯಕ್ರಮ ಬೇಡವೆಂದು ಕೇವಲ ಒಂದು-ಒಂದೂವರೆಯ ಸಮಯ ನಿರ್ಬಂಧ ಹಾಕಿಕೊಂಡೆವು.ಮೊದಲಾಗಿ ಕಾರ್ಯಕ್ರಮದಲ್ಲಿ ಏನಿರಬೇಕು ಎಂದು ನಿಶ್ಚಯಿಸಿದೆವು. ಲೈವ್ ಸಿಡಿಯಿಂದ ಉಬುಂಟು ಚಾಲೂ ಮಾಡಿ,ಅದರ ಗುಣಗಳ ಪರಿಚಯ ಮಾಡುವುದು-ಲಭ್ಯವಿರುವ ತಂತ್ರಾಂಶಗಳು,ಸುಲಭ ಬಳಕೆ,ಐಬಸ್ IMEಯಿಂದ ಸ್ಥಳೀಯ ಭಾಷೆ ಬಳಕೆ ಸುಲಭವಾಗಿರುವ ಬಗೆ,ಬೇಕಾದ ತಂತ್ರಾಂಶಗಳನ್ನು ಇಳಿಸಿಕೊಳ್ಳುವ ಬಗೆ,ಕಂಪ್ಯೂಟರ್-ನಿಸ್ತಂತು ಇತ್ಯಾದಿ ಜಾಲಗಳಿಗೆ ಸಂಪರ್ಕಿಸುವ ಬಗೆ,ಪ್ರೊಗ್ರಾಮಿಂಗ್‌ಗೆ ಉಬುಂಟುವಿನಲ್ಲಿ ಇರುವ ಸಾಧ್ಯತೆ ,ಭದ್ರತೆ ಇತ್ಯಾದಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವುದು ಎಂದು ನಿರ್ಣಯ.

ಉಬುಂಟು ಡೆಸ್ಕ್‌ಟಾಪಿನ ಹಿನ್ನೆಲೆಯ ಪೋಸ್ಟರ್ ರಚನೆ ನಂತರದ ಹೆಜ್ಜೆ. ಭಾಗವಹಿಸಲು ನೋಂದಾವಣೆ ಮಾಡುವಂತೆ ಸೂಚಿಸಿದೆವು, ಶನಿವಾರ ಮಧ್ಯಾಹ್ನ ಹನ್ನೊಂದು ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವಾಗ ಎಷ್ಟು ಜನರು ಬರಬಹುದು ಎಂಬ ಮುನ್ನೆಚ್ಚರಿಕೆಗಾಗಿ ಈ ಕ್ರಮ.

ಕಾರ್ಯಕ್ರಮದ ಪ್ರಕಟನೆಯಾದ್ದು ಬುಧವಾರ.ಗುರುವಾರ ರಜೆ. ಶುಕ್ರವಾರದ ಹೊತ್ತಿಗೆ ನೋಂದಾಯಿಸಿಕೊಂಡವರು ಮೂವತ್ತೈದು. ಐಬಿಎಂ‌ನವರ ಪ್ರಾಜೆಕ್ಟ್ ತರಬೇತಿಯೂ ಶನಿವಾರ ನಡೆಯಲಿರುವುದು,ಲ್ಯಾಬ್ ಸೆಶನಲ್ಸ್‌ಗಳು,ತರಗತಿಗಳು ಇವೆಲ್ಲಾ ನೋಂದಾವಣೆಯ ಮೇಲೆ ಪರಿಣಾಮ ಬೀರಿದ ಅಂಶಗಳು.

ಶನಿವಾರ ಮತ್ತೂ ಹದಿನೈದು ನೋಂದಾವಣೆಯಾದುವು.ಐವತ್ತು ಜನರ ನಿರೀಕ್ಷೆಯಲ್ಲಿ ಕಾರ್ಯಕ್ರಮ ಆರಂಭವಾದರೂ ಬಂದವರು ನೂರೈವತ್ತು ಜನ! ಅದೇನು ಉಬುಂಟು ಮಾಯಕವೋ!

ಲಿನಕ್ಸ್ ನಡೆದು ಬಂದ ದಾರಿಯ ಬಗ್ಗೆ ಕಿರು ಪರಿಚಯದೊಂದಿಗೆ ಕಾರ್ಯಕ್ರಮ ಆರಂಭ(ವಿನಯ್). ನಡುನಡುವೆ ಪ್ರಶ್ನೆಗಳನ್ನು ಕೇಳಿ,ಉತ್ತರಿಸಿದವರಿಗೆ ಉಬುಂಟು ಸಿಡಿ ನೀಡಿದೆವು. ನಂತರ ಉಬುಂಟುವಿನ ಗುಣಗಳನ್ನು ಪರಿಚಯಿಸಲಾಯಿತು(ಸಂಪದಿಗ ವಾಸುದೇವ್,ಇನ್ವೆಂಜರ್ ಇಂಕ್.)

ಉಬುಂಟುವಿನ ಅನುಸ್ಥಾಪನೆ-ಅದೆಷ್ಟು ಸುಲಭ ಎಂದು ಪ್ರದರ್ಶಿಸಿ(ರಾಜೀವನ್) ಕಾರ್ಯಕ್ರಮ ಮುಕ್ತಾಯ.ಅನುಸ್ಥಾಪನೆಯ ಕಾರ್ಯ ನಡೆಯುತ್ತಿದ್ದಂತೆ ಮತ್ತೆ ರಸಪ್ರಶ್ನೆ.ಮತ್ತೆ ಉಬುಂಟು ಬಳಸಿನೋಡಿ ಭೇಟಿಯಾಗೋಣ ಎಂಬ ಹಾರೈಕೆ.

(ಸಹಕರಿಸಿದವರು-ವಾಸುದೇವ್,ವಿನಯ್,ರಾಜೀವನ್,ಪ್ರೊ.ಯುವರಾಜು,ಪ್ರತಿಭಾ,ಆದಿತ್ಯ,ಸುಶ್ರುತ್,ರತನ್,ಪ್ರಶಾಂತ್,ವರುಣ್,ವಿಘ್ನೇಶ್,ಸುದರ್ಶನ್ ರೈ,ವಿಸ್ತಾ ತಂಡ,ಐಎಸ್ ವಿಭಾಗ,ಭೂಷಣ್ ಕಾಮತ್,ಕಾರ್ತಿಕ್ ಕಸ್ತೂರಿ,ರಾಕೇಶ್................)

==================================================

ವಾಹನಗಳಲ್ಲಿ ಸಾಗುವಾಗ ಉಗಿಯಬೇಡಿ-ಉಗಿದು ಉಗಿಸಿಕೊಳ್ಳದಿರಿ.

------------------------------------------------------------------------------------------

ಬಾಯಿಯಲ್ಲಿ ಉಗುಳು ತುಂಬಿರುವಾಗ ಮಾತನಾಡದಿರಿ-ಮಾತಿನಲ್ಲಿ ಉಗುಳಿನದಲ್ಲ ಮಾಧುರ್ಯದ ಸಿಂಚನ ಇರಲಿ!

-------------------------------------------------------------------------

___LINK_OPEN_href="http://www.vijaykarnatakaepaper.com/epaper/pdf/2009/11/08/20091108a_009101002.jpg"___ಮೂರು ಗುಟ್ಟು,ಒಂದು ಸುಳ್ಳು,ಒಂದು ನಿಜ

---------------------------------------------------------------