೧
ಉಸಿರಾಡುವಾಗ
ನೀನು
ನನ್ನಗಲಿ
ಹೋಗುವೆಯೆ೦ದೆನಿಸಿ
ಉಸಿರಾಡುವುದನ್ನು ನಾ ಮರೆತೆ
೨
ಕಣ್ಣೊಳಗೆ
ನೀ ಕುಳಿತೆ
ನಿನಗೆ
ನೋವಾಗಬಾರದೆ೦ದು
ಕಣ್ರೆಪ್ಪೆ
ಆಡಿಸುವುದನ್ನು ಮರೆತೆ
೩
ದಿನವೂ
ನಿನ್ನ
ನೆನಪಾಗಿ
ನನಗೆ ನಾನೇ
ನೆನಪಾಗಿ ಹೋದೆ
೪
ಕಣ್ಹಾಯಿಸಿದಷ್ಟು
ನಿನ್ನ ನೆರಳು
ಕ೦ಡಿತು
ನನ್ನ ನೆರಳು
ನಿನ್ನೊಡನೆ
ಬೆರೆತು ನಡೆಯಿತು
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!