ನಾನು ನಾನಗಬೇಕು
ನನಗ್ಯಾಕೆ ಇನ್ನೊಂದು ಹೆಸರು
ಸಿಂಚನವೊ ಇಂಚರವೊ
ಬರೆವವನು ನಾ ತಾನೆ
ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ
ಮೊರೆ ಹೋದ ನಾನು
ಇನ್ನಾದರು ಎದುರಿಸಬೇಕು
ಹೊಗಳಿಕೆಗಳ ಅಸ್ವಾದಿಸಿದಂತೆ
ನಾನು ನಾನಗದಿದ್ದರೆ ನನಗೇನು ಬೆಲೆ
ನಾನು ನಾನಗ ಹೊರಟಿರುವೆ
ಉಗಿತಕ್ಕೆ, ಹೊಡೆತಕ್ಕೆ,
ಹೊಗಳಿಕೆಗೆ ತೆಗಳಿಕೆಗೆ
ಅಂಜದೆ ಅಳುಕದೆ
ನಡೆಯುವ ಸ್ಥೈರ್ಯವನ್ನು ಹೊತ್ತು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!