ಕೆಂಪೇಗೌಡ: ಇದರ ಅರ್ಥ ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಮುಂದೆ ಓದಿ.
ನನಗೆ ದಿನಾ ಮಧ್ಯಾನ್ಹ ಊಟ ಆದಮೇಲೆ ಸ್ವಲ್ಪ ನಿದ್ದೆ ಬರತ್ತೆ [ಹಾಗೇ ಕೂತಲ್ಲೇ ತೂಕಡಿಸ್ತಾ ಇರ್ತೀನಿ]. ಇವತ್ತು [೧:೩೦ಕ್ಕೆ] ಊಟಾ ಮಾಡಿ ಬಂದು ಸ್ವಲ್ಪ ಹಂಗೇ ಟೇಬಲ್ ಮೇಲೆ ಒರಗಿದ್ದೆ.. ನನ್ ಎದುರುಗಡೆ ಕೂಡುವ ನನ್ನ ಮಿತ್ರ [ತಮಿಳಿನವ, ದೀಪಕ] ಬಂದು ಎಬ್ಬಿಸಿದ. ಆಮೇಲೆ "Your eyes are red man" ಅಂತ ಅಂದಾ. ಅದಕ್ಕೆ ಕನ್ನಡದ ಇನ್ನೊಬ್ಬ ಮಿತ್ರ "ಯಾಕ್ರಿ ಕಣ್ಣು ಅಶ್ಟೊಂದು ಕೆಂಪಗೆ ಆಗಿದೆ?" ಅಂತ ಕೇಳಿದಾ. ನಾನು ಸುಮ್ಮನೇ ಒಂದು smile ಕೊಟ್ಟೆ. ಆಗ ದೀಪಕ್ ಕೇಳಿದ "Kempu means what?" ಅದಕ್ಕೆ ನಾನು "Kempu means Red" ಅಂದೆ. ಅದಕ್ಕೆ ಅವನು ಫುಲ್ ಖುಷಿಯಾಗಿ "Now I understood what is the meaning of Kempegouda" ಅನ್ನೋದಾ?
ಬೇಜಾರು ಏನಂದ್ರೆ ನನ್ ನಿದ್ದೆ ಎಲ್ಲಾ ಹಾಳಾಗಿ ಹೋಯ್ತು. :-(
ಪ್ರತಿಕ್ರಿಯೆ (1)