ಈ ಲೇಖನವನ್ನು ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ..

ಸಂಪದ ಓದುಗರಿಗಾಗಿ ಇಲ್ಲೊಮ್ಮೆ ಪ್ರಸ್ತುತಪಡಿಸುತ್ತಿದ್ದೇನೆ..

ಬ್ಲಾಗ್ ವಿಳಾಸ:- http://shivagadag.blogspot.com

 

ಇದನ್ನು ನಾನು "ಬಸ್ ಕಂಡಕ್ಟರ" ನಾಟಕದಲ್ಲಿ ಕೇಳಿದ್ದು.. ಹಾಗೇ ಇದೇ ತರಹದ ಮೆಸೇಜನ್ನು ನನ್ನ ಗೆಳೆಯ ಚಿಕ್ಕನಾಯಕನಹಳ್ಳಿಯಲ್ಲಿರುವ ಯದು (ಢಾಭಾ) ಎಸ್.ಎಂ.ಎಸ್. ನಲ್ಲಿ ಕಳಿಸಿದ ಶಾಯರಿಯನ್ನು ಮಿಕ್ಸ್ ಮಾಡಿ (ಉಪ್ಪಿಟ್ಟಿನ ತರಹ), ನಿಮ್ಮ ಮುಂದೆ ಇಡ್ತಾ ಇದೀನಿ..
ರುಚಿಯಾಗಿದ್ರೂ, ರುಚಿಯಾಗಿ ಇಲ್ಲದೇ ಇದ್ರೂ ನಿಮ್ಮ ಕಾಮೆಂಟ್ ಗಳನ್ನು ಬರೆದು ತಿಳಿಸಿ,, ಈ ಶಿವಶಂಕರ ಹೊಗಳಿಸಿಕೊಳ್ಳೋಕು ರೆಡಿ, ಬೈಸಿಕೊಳ್ಳೋಕು ರೆಡಿ.. ನಮ್ಮ ಬಿಜಾಪುರದ ಜನರು ಹಾಸ್ಯ ಪ್ರಿಯರು.. ಅವರೂ ಮೆಚ್ಚಿಕೊಂಡ್ರೆ ಓಕೆ..(ಇದು ಕೇವಲ ನಿಮ್ಮ ಮನರಂಜನೆಗಾಗಿ..)

" ಅಣ್ಣ ಬಾಸೇಖಾನ, ಹೆಣ್ಣ್  ದೇಖನೆ ಕೋ
ಗೆಣ್ಣೂರ್ ಕೊ ಗಯಾ ಥಾ..
ಗಾಡೀ-ಗೀಡಿ ಕ್ಯಾ ಭಿ
ನಹೀ ಮಿಲಾ ರೇ.. ಹಂಗಾ ಕಾಲೀಲೆ
ನಡಕೊಂತಾ ಚಲಾ ರೆ..
ಅಡ್ಡ ಹಾದೀ ಮೆ
ಎಕ್ ದೊಡ್ಡ ಹಾವು ಗಂಟ್ ಪಡ್ಯಾ..
ವೊ ಎತ್ತಾ ಬಡಾ ಕಲ್ಲು ಲೇಕೆ
ಐಸಾ ಮಾರಾ ಐಸಾ ಮಾರಾ..

ವೊ ವಿಲಿ-ವಿಲಿ ಒದ್ದಾಡ್ ಕರ್ ಮರ್ ಗಯಾ..."

ಈ ಶಾಯರಿಯನ್ನು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಢಾಭಾ ದಲ್ಲಿ ಕೆಲಸ ಮಾಡ್ತಾ ಇರುವ ನನ್ನ ಗೆಳೆಯ 'ಯದು' ವಿಗಾಗಿ ಸಮರ್ಪಿಸುತ್ತಿದ್ದೇನೆ.. ನನ್ನ 6000 ಎಸ್.ಎಂ.ಎಸ್. ಸಂಗ್ರಹದಲ್ಲಿ ಬಹು ಪಾಲು ಇವನಿಂದಲೇ ಬಂದಿದ್ದು.. ಅವನ ಋಣವನ್ನು ಈ ರೀತಿಯಾಗಿ ತೀರಿಸ್ತಾ ಇದ್ದೀನಿ..)

ತಪ್ಪದೇ ನಿಮ್ಮ ಕಾಮೆಂಟ್ ಗಳನ್ನು ಬರೀರಿ..

ಇತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ