ಬಾಳೆಲ್ಲಾ ಬರೀ ಮೋಜು ಖುಶಿಯ ಗುಣಿಕೆ ಎಂದು  

ಹಾಡಿ ಪಾಡಿ ನಲಿದು ಕುಣಿದು ಕ್ಷಣಿಕ

ಹರೆಯ ಶಾಶ್ವತವೆಂದು ಸಾರಿ

ಜಗಕೆಲ್ಲಾ , ಆಡಿ ಆಟ  ಹೂಡಿ ಮಾಟ

ಮೋಡಿ ,ಒಡನಾಡಿಯ

ಹುಡುಕಿ ಕೂಡಿ ಕೂಡಿ

ದಿನಗಳು ಒಡಗೂಡಿ

ಹುಚ್ಚು ಹರೆಯದ

ಹುಚ್ಚು  ಕಳೆದು

ಒಡನಾಡಿ ದೂರ ಓಡಿ

ಧೂರ್ತ ನಗೆ ನಕ್ಕಾಗ 

ಬೆಪ್ಪಾದೆ

ನಾ