ನಾ ಬಂಧಿಯಾಗಿರುವೆ, ನನ್ನೊಳಗೆ,

ನನ್ನ ಭಾವನೆಗಳೊಳಗೆ.

 

ಹಲವು ನೂರು ಭಾವಗಳು,

ಕೆಲವಾರು ಸಂಘರ್ಷಗಳು,

ಹತ್ತಿ ಬಂದ ಮೆಟ್ಟಿಲುಗಳು,

ಸಾಗಬೇಕಿರುವ ದಾರಿಗಳು.

 

ಕಾಣದ ಕಣ್ಗಳ ಸೆಳೆತ,

ನೆನಪುಗಳ ಮೊರೆತ,

ಅದಮ್ಯ ಗಮ್ಯಗಳ ಗಣಿತ,

ಕನಸುಗಳ ಭವ್ಯ ಕುಣಿತ!

 

ನಾ ಬಂಧಿಯಾಗಿರುವೆ, ನನ್ನೊಳಗೆ,

ನನ್ನ ಭಾವನೆಗಳೊಳಗೆ.