ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.

ಈವತ್ತು ಬೆಳಗ್ಗೆ ಕುಮಾರ ಕೃಪ ರೋಡಿಂದ ಅರಮನೆ ರಸ್ತೆ ಮೂಲಕ ಮನೆಗೆ ಹಿಂತಿರುಗುತ್ತಿರುವಾಗ ಬಸ್ ಕಿಟಕಿಯಿಂದ ಕಂಡ "ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (National Gallery of Modern Art)" ಹೊರಗಿನ ಚಿತ್ರಗಳು ಹಾಗೇ ಸೆಳೆದವು.ಅಲ್ಲೇ ಸ್ಟಾಪ್ ಕೊಟ್ಟಿದ್ದರಿಂದ ಮರು ಆಲೋಚಿಸದೆ ಬಸ್ಸಿಂದ ಕೆಳಗಿಳಿದು ಹೊರಟೆ. :)

ಪ್ರವೇಶ ದರ ೧೦ ರೂ. ಕ್ಯಾಮೆರಾದಿಂದ ಪೋಟೋ ತೆಗೆಯುವಂತಿಲ್ಲ ಕಣ್ಗಳ ಮೂಲಕ ತೆಗೆಯಬಹುದಷ್ಟೇ!!

ಒಳ ಹೋದಂತೆ ವಾವ್! ಕೋಣೆಯೊಳಗಿನ್ನೊಂದು ಮತ್ತೊಂದು ಮಗದೊಂದು ಕೋಣೆಗಳು!! ಪ್ರತಿ ಕೋಣೆಯೊಳಗೂ ಬೆರಗುಗೊಳಿಸುವ ರೇಖಾ,ಜಲ,ಆಯಿಲ್ ವರ್ಣ ಚಿತ್ರಗಳು!! ೧೮೫೦ ರಿಂದ ಈಗಿನವರೆಗಿನ ಹಲವಾರು ಕಲಾವಿದರ ಚಿತ್ರಗಳು. ಮೈಸೂರು ಶೈಲಿಯಿಂದ ಮಾಡ್ರನ್ ಆರ್ಟ್ವರೆಗೆ ಲೆಕ್ಕವಿರಿಸಲಾಗದಷ್ಟು ಕಲಾಕೃತಿಗಳು!! ನನಗಿಷ್ಟವಾದ ಕಲಾಕೃತಿಗಳ ಮತ್ತು ಕಲಾವಿದರ ಹೆಸರುಗಳನ್ನ ಟಿಕೇಟ್ ಹಿಂದೆ ಗೀಚಿಕೋಳ್ಳುತ್ತಾ ಹೋದೆ. :)

ರವೀಂದ್ರನಾಥ್ ಟ್ಯಾಗೋರ್,

ಅರಬಿಂದ ನಾಥ್ ಟ್ಯಾಗೋರ್,

ರಾಜಾ ರವಿವರ್ಮ,

ಶಾರ್ದಾ ಯುಕಿಲ್ ರ Chaitanya,

ಮಹದೇವನ್ ಮೆನನ್ ರ Cow Heards & Bamboo Grooves

ಎಮ್.ಎ.ಆರ್ ರ Omar Khayyam,

ಹೇಮ ಉಪಾಧ್ಯಾಯರ The Red End,

ಖೇಮ್ರಾಜ್ ರ Une Vie,

ಜಗದೀಶ್ ಚಂದರ್ ರವರ After Image II

ಸೋಹನ್ ಕದ್ರಿಯವರ Invocation,

ನಂದಲಾಲ್ ಬೋಸ್ ರ Chandilka,

ಅಮ್ರಿತಾ ಷೇರ್ಗಿಲ್ ರವರ Village Girl,

ಜಾಮಿನಿ ರಾಯ್ ರವರ Bengali Woman,

ಕೃಷ್ನಮಾಚಾರಿ,

ಹರ್ಶ,

ಮುಖುಲ್ ದೇ, 

.

.

.

.

.

.

ಎಣಿಸಲಾರದಷ್ಟು ಚಿತ್ರಗಳು!!! ಚೆಂದದ ಅನುಭವ!!

ಜೊತೆಗೆ ಸತ್ಯಜಿತ್ ರೇ ರವರ "ಸಿನೆಮಾ ಮೇಕಿಂಗ್" ಬದುಕಿನ ಹಲವಾರು ಪೋಟೋಗಳನ್ನ ನೋಡುವ ಅವಕಾಶ ಸಿಕ್ಕಿದ್ದು ಸ್ಫೆಷಲ್!! ಸತ್ಯಜಿತ್ ರೇ ಬಗ್ಗೆ ಹೆಚ್ಚು ಗೊತ್ತಿರದಿದ್ದರೂ ಪ್ರದರ್ಶನದಲ್ಲಿದ್ದ ಆ ಪೋಟೋಗಳಲ್ಲಿ ಅವರ ಮುಖದಲ್ಲಿ ಎದ್ದು ಕಾಣುವ "ಪ್ರತಿ ಕ್ಷಣವನ್ನೂ ಬಿಡದೆ ಬದುಕಿದ ತೀಕ್ಷ್ಣತೆ ಮತ್ತು ಆ ಪ್ಯಾಶನ್, ಮಾಡುವ ಕೆಲಸದಲ್ಲಿನ ಪರ್ಫೆಕ್ಟಿಸಮ್" ಹೆಚ್ಚು ಹಿಡಿಸಿತು. ಜೊತೆಗೆ ಅವರ ಸಿನೆಮಾಗಳನ್ನ ನೋಡುವ ಕುತೂಹಲವನ್ನೂ ಹುಟ್ಟಿಸಿದೆ! :)

ಈ ಆರ್ಟ್ ಗ್ಯಾಲರಿಯನ್ನ ಹಾಗೇ ಒಮ್ಮೆ ನೋಡಲು ಮಿನಿಮಮ್ ಅರ್ಧ ದಿನ, ವಿವರವಾಗಿ ನೋಡಲು ಒಂದು ದಿನ ಪೂರ್ತಿಯಾಗಿ ಬೇಕು. :) ನೀವು ನೋಡಲು ಮಾತ್ರ ಮಿಸ್ ಮಾಡಬೇಡಿ.

------------------------------------------------

 ನಂತರ ಚರ್ಚ್ ಸ್ಟೀಟ್ನಲ್ಲಿನಲ್ಲಿನ ಪುಸ್ತಕದಂಗಡಿಗಳಲ್ಲಿ ಸುತ್ತಾಡಿ, ಹೈದರಾಬಾದ್ ಬಿರಿಯಾನಿ ಸವಿ ನೋಡಿ, ನಾಲ್ಕರ ಹೊತ್ತಿಗೆ ಮಿಡ್ಫ಼ೋರ್ಡ್ ರೋಡ್ ಕಡೆ ಪಯಣ.

ಈವತ್ತು ಜನಾರ್ಧನ ಸ್ವಾಮಿಯವರ (ಜೆ.ಸ್ವಾಮಿಯೆಂದು ಹೆಚ್ಚು ಪರಿಚಿತ) "ವ್ಯಂಗ್ಯ ಚಿತ್ರಗಳ" ಪ್ರದರ್ಶನ "Indian Institute of Cartoonists" ನಲ್ಲಿತ್ತು. ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದಿದ್ದವು, ಲೇಟಾಗಿ ಹೋದದ್ದರಿಂದ ಆರಾಮಾಗಿ ನೋಡಿಕೊಂಡು ಬರಲಾಯ್ತು.ಬೆಳಗಿನ ಕಾರ್ಯಕ್ರಮದ ಕೆಲ ಪೋಟೋಗಳನ್ನ ನೋಡಲಿಕ್ಕೆ ಸಿಕ್ತು.

___LINK_OPEN_ href="http://3.bp.blogspot.com/_k9vvXPJLZgk/SzZGDrfwOCI/AAAAAAAAA60/TzlFJTc1k0s/s1600-h/_C251676.JPG"___

 

 

 

 

 

 

ಅವರು ಕಾಲೇಜಿನ ಸಮಯದಿಂದ ಈಗಿನವರೆಗೆ ರಚಿಸಿದ ಚೆಂದದ ವ್ಯಂಗ್ಯ ಚಿತ್ರಗಳು ಇಲ್ಲಿವೆ 

___LINK_OPEN_ href="http://3.bp.blogspot.com/_k9vvXPJLZgk/SzZUieOdLzI/AAAAAAAAA8c/ReBhOUyVco8/s1600-h/IMG_0093.JPG"___

 

 

___LINK_OPEN_ href="http://1.bp.blogspot.com/_k9vvXPJLZgk/SzZHclYad1I/AAAAAAAAA7M/lc4bqhoHvJw/s1600-h/IMG_0103.JPG"___

 ___LINK_OPEN_ href="http://3.bp.blogspot.com/_k9vvXPJLZgk/SzZHlkc49wI/AAAAAAAAA7U/rleKtajjNNc/s1600-h/IMG_0117.JPG"______LINK_OPEN_ href="http://1.bp.blogspot.com/_k9vvXPJLZgk/SzZIx1eJ0fI/AAAAAAAAA8E/avXJ_5zkfOE/s1600-h/IMG_0122.JPG"___

 ___LINK_OPEN_ href="http://4.bp.blogspot.com/_k9vvXPJLZgk/SzZHvutpM6I/AAAAAAAAA7c/tL-i-jCz2OI/s1600-h/IMG_0119.JPG"___

 

___LINK_OPEN_ href="http://2.bp.blogspot.com/_k9vvXPJLZgk/SzZH1mc3SHI/AAAAAAAAA7k/nIF8JsLW_D8/s1600-h/IMG_0123.JPG"___

 

___LINK_OPEN_ href="http://3.bp.blogspot.com/_k9vvXPJLZgk/SzZIXL8CZkI/AAAAAAAAA78/nC86uikYznI/s1600-h/IMG_0124.JPG"______LINK_OPEN_ href="http://4.bp.blogspot.com/_k9vvXPJLZgk/SzZH8k99GdI/AAAAAAAAA70/IZD6vvMVGkQ/s1600-h/IMG_0115.JPG"___

 

 

ಹಾಗೇ ಅಚಾನಕ್ಕಾಗಿ ಮತ್ತೊಂದು ಫೋಟೋದಲ್ಲಿದವರೊಬ್ಬರನ್ನ ಗುರುತಿಸಿದಾಗ ಸಖತ್ ಷಾಕ್!! ಜೊತೆಗೆ ಸಖತ್ ಸಂತಸವಾಯ್ತು!! :) ನಿಮಗೆ ಗೊತ್ತಾಯ್ತಾ ಯಾರೆಂದು?!! :)

___LINK_OPEN_ href="http://1.bp.blogspot.com/_k9vvXPJLZgk/SzZGl361siI/AAAAAAAAA68/vpVEdIpO2FU/s1600-h/_C251686.JPG"___

 

 

 

 

 

 

ಸಂಜೆ ಮನೆಗೆ ವಾಪಸ್ ಬರುವಾಗ ನಾ ಕ್ಲಿಕ್ಕಿಸಿದೊಂದು ಚಿತ್ರ :)

___LINK_OPEN_ href="http://4.bp.blogspot.com/_k9vvXPJLZgk/SzZGxKHrv6I/AAAAAAAAA7E/NpBU-yP-COY/s1600-h/IMG_0139.JPG"___

 

 

 

 

 

 

ನನಗೆ ಈವತ್ತು ಒಂಥರಾ ಕಂಪ್ಲೀಟ್ "ಕಲಾ ದಿನ" ವಾಗಿತ್ತು. :)ನಿಮ್ಮ ದಿನ ಹೇಗಿತ್ತು?! ತಿಳಿಸಿ :)

ಧನ್ಯವಾದಗಳು

ಸವಿತ :)

 

ಚಿತ್ರ ಕೃಪೆ:
ವ್ಯಂಗ್ಯ ಚಿತ್ರಗಳು ಜೆ.ಸ್ವಾಮಿಯವರವು, ಅವುಗಳ ಪೋಟೋ ತೆಗೆದದ್ದು ನಾನು :)
ಕಾರ್ಯಕ್ರಮದ ಪೋಟೋಗಳು IIoCಯವರು ಕೊಟ್ಟವು.