ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ.
ಈ ವಾರದ ಪರಾಗಸ್ಪರ್ಶ (ವಿಜಯಕರ್ನಾಟಕ ಪತ್ರಿಕೆಯಲ್ಲಿನ ಭಾನುವಾರದ ಅಂಕಣ)ದಲ್ಲಿ "ಭೋಗ ಷಟ್ಪದಿಯ ಬೆನ್ನೇರಿ ಬಂತು ಕಲ್ಪನಾವಿಲಾಸ" ಎಂಬ ತಲೆಬರಹದ ಲೇಖನ. ಪ್ರೊ.ಅ.ರಾ.ಮಿತ್ರ ಅವರ ’ಛಂದೋಮಿತ್ರ’ ಪುಸ್ತಕವನ್ನು ಕಿರುಪರಿಚಯ ಮಾಡಿ, ಅದರ ಸ್ಫೂರ್ತಿಯಿಂದ ಎಂಬಂತೆ ಸಮಕಾಲೀನ ವಿಚಾರಗಳನ್ನು ಸಾಮಗ್ರಿಯಾಗಿಸಿ ಐದಾರು ಭೋಗ ಷಟ್ಪದಿ ಪದ್ಯಗಳನ್ನು ರಚಿಸಿ ಪ್ರಸ್ತುತಪಡಿಸಿದ್ದೇನೆ.ಭೋಗ ಷಟ್ಪದಿ ಛಂದಸ್ಸಿನಲ್ಲೇ ತಮಾಷೆಯ ಪದ್ಯವೊಂದನ್ನು ರಚಿಸಿ ಕಳಿಸುವಂತೆ ಓದುಗರಿಗೂ ಆಹ್ವಾನವಿತ್ತಿದ್ದೇನೆ. ಸಂಪದದಲ್ಲಿ ಕವಿಪ್ರತಿಭೆಗಳು ಅನೇಕರಿರುವುದರಿಂದ ಯಾರಾದರೂ ಆಸಕ್ತಿಹುಟ್ಟಿ ಒಳ್ಳೆಯ ಷಟ್ಪದಿ ರಚಿಸಬಹುದು ಎಂಬ ಆಶಯದಿಂದ ಇಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ.
ಪರಾಗಸ್ಪರ್ಶ ಲೇಖನದ ___LINK_OPEN_href="http://www.vijaykarnatakaepaper.com/pdf/2010/01/24/20100124a_008101002.pdf" target="_blank"___ಕೊಂಡಿ ಇದು.
ಷಟ್ಪದಿ ರಚಿಸುವುದಿದ್ದರೆ ನೀವು ನನ್ನ ಇಮೇಲ್ ವಿಳಾಸಕ್ಕೇ ([email protected]) ಬರೆದು ತಿಳಿಸಬೇಕಾಗಿ ಕೋರುತ್ತೇನೆ.
ಶ್ರೀವತ್ಸ ಜೋಶಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!