http://sampada.net/blog/savithru/24/04/2010/25029 "ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ ಆಧಾರ ಯಾವುದು? ಅದರ ವಿಷಯಯವೇನು?"
ಎಂಬ ಪ್ರಶ್ನೆಗೆ ಕೆಲವರು ಆಸಕ್ತಿ ವಹಿಸಿದರು. ಇದನ್ನೇ ನೆಪವಾಗಿಟ್ಟುಕೊಂಡು ಕನ್ನಡ ಅದೆಷ್ಟು ಕಾಲದ ಹಿಂದೆ ಅಸ್ತಿತ್ವದಲ್ಲಿತ್ತು, ಅದರ ಇತಿಹಾಸಕ್ಕೆ ದಾಖಲೆಗಲೆನಿರಬಹುದು, ಅನ್ನುವ ಬಗ್ಗೆ ಈ ಲೇಖನ.
೧. ಕ್ರಿಸ್ತ ಪೂರ್ವ ೩ ನೆ ಶತಮಾನಕ್ಕೆ ಸೇರಿದ ಬ್ರಹ್ಮಗಿರಿ ಶಾಸನ ( ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ) ದಲ್ಲಿ "ಇಸಿಲ" ಎಂಬ ಪದ ಇದೆ. ಡಿ ಎಲ್ ನರಸಿಂಹಚಾರ್ ಅವರು ಈ ಇಸಿಲ ಪದ ಕನ್ನಡ ( ಸ್ಥಳನಾಮ) ಎಂದಿದ್ದಾರೆ.
೨. ೧೮೯೯ ರಲ್ಲಿ Biblical Archeological Association ಅವರಿಗೆ Oxyrinchus ಎಂಬಲ್ಲಿ ದೊರೆತ papyri ದಾಖಲೆಗಳಲ್ಲಿ ಒಂದು ಗ್ರೀಕ್ ಪ್ರಹಸನ ದೊರೆತಿದೆ. ಅದರಲ್ಲಿ ಗ್ರೀಕ್ನ ಒಬ್ಬಳು ರಾಣಿಯನ್ನು ಕೆಲವರು ಕಿಡ್ನಾಪ್ ಮಾಡಿಕೊಂಡು ಹೋಗುವ ಪ್ರಸಂಗವಿದೆ. ನಾಯಕ ರಾಣಿಯನ್ನು ಬಿಡಿಸಿಕೊಂಡು ಹೋಗಲು ರಾಣಿಯಿದ್ದ (ಈಗಿನ ನಮ್ಮ ಕರಾವಳಿ ಪ್ರದೇಶ ಅನ್ನುತ್ತಾರೆ) ಸ್ಥಳಕ್ಕೆ ಬಂದ ಸನ್ನಿವೇಶದಲ್ಲಿ ಅಲ್ಲಿನ ಕೆಲ ಪಾತ್ರಗಳು "ವಿಚಿತ್ರ ಭಾಷೆ" ಯನ್ನು ಮಾತನಾಡುತ್ತಾರೆ. ವೊಲ್ಶ್, ಗೋವಿಂದಪೈ ಮುಂತಾದವರು ಈ ವಿಚಿತ್ರ ಭಾಷೆಯನ್ನ ಕನ್ನಡ ಎನ್ನುತ್ತಾರೆ. ಈ ಗ್ರೀಕ್ ಪ್ರಹಸನದ ಕಾಲ ಕ್ರಿಸ್ತ ಪೂರ್ವ ೨ನೆ ಶತಮಾನ ಎಂದು ಅಂದಾಜಿಸಿದ್ದಾರೆ.
೩. ಟಾಲೆಮಿಯ ಪ್ರವಾಸ ಕಥನ ( ೧೫೦ AD )ದಲ್ಲಿ ಬರುವ ಕೆಲವು ಶಬ್ಧಗಳು ಕನ್ನಡದವು ಎಂದು ಗೋವಿಂದಪೈ ಸೂಚಿಸುತ್ತಾರೆ.
೪. ಶಾತವಾಹನ ದೊರೆ ಹಾಲನ ಗಾಥಾಸಪ್ತಶತಿ ಯಲ್ಲಿನ 'ಅತ್ತಾ', 'ಪೊಟ್ಟೆ', 'ತುಪ್ಪ', 'ಪೆಟ್ಟು', 'ತೀರ್' ಮೊದಲಾದವು ಕನ್ನಡದವು ಎಂದು ಗೋವಿಂದ ಪೈ ವಾದಿಸುತ್ತಾರೆ.
೫. ಹರಪ್ಪಾ ಮೆಹೆಂಜೊದಾರೋ ನಲ್ಲಿ ದೊರೆತ ಮುದ್ರೆಗಳು ಕನ್ನಡ ಎಂದು ಫಾದರ್ ಹೆರೋಸ್ ___LINK_OPEN_href="http://en.wikipedia.org/wiki/Henry_Heras"___http://en.wikipedia.org/wiki/Henry_Heras ಅವರು ಸೂಚಿಸುತ್ತಾರೆ.
೬. ಕ್ರಿಸ್ತಶಕ ೨ ನೆ ಶತಮಾನದ "ಲಲಿತ ವಿಸ್ತಾರ" ( ಬೌದ್ದ ಗ್ರಂಥ ) ಕೃತಿಯಲ್ಲಿ ಹಲವು ಭಾರತೀಯ ಲಿಪಿ ಗಳ ಜೊತೆಗೆ "ಕನಾರಿ" ಎಂಬ ಲಿಪಿಯನ್ನು ಹೆಸರಿಸಿದ್ದಾರೆ. ಇದು ಕನ್ನಡವೇ ಎಂದು ಪಾಂಡುರಂಗರಾವ್ ದೇಸಾಯಿಹೇಳಿದ್ದಾರೆ.
೭.ಕ್ರಿಸ್ತಶಕ ೧೫೦ ರ ಪ್ರಾಕೃತ ಶಾಸನವೊಂದರಲ್ಲಿ "ಮಟ್ಟಪಟ್ಟಿ" ಎಂಬ ಪದವಿದ್ದು ಅದು ಕನ್ನಡದ "ಮಳವಳ್ಳಿ"ಯೇ ಎಂಬ ವಾದವಿದೆ.
೯. ಸನ್ನತಿ ಯಲ್ಲಿ ದೊರೆತ ಕೆಲ ಪ್ರಾಕೃತ ಶಾಸನಗಳಲ್ಲಿ "ಸಂಕಪ", "ನಗಿಪ" ಎಂಬ ವ್ಯಕ್ತಿನಾಮಗಳಿವೆ. ಇವು "ಅಪ್ಪ" ಎಂಬ ಕನ್ನಡ ಎಂಬ ಕನ್ನಡ ರೂಪ ಹೊಂದಿವೆ.
೧೦. ಸನ್ನತಿಯ ಮತ್ತೊಂದು ಶಾಸನದಲ್ಲಿ ಕನ್ನಡದ "ಮುನ್ + ಪಳ್ಳಿ" ಸೇರಿ ಮುನಾಳ್ಳಿ ಎಂದಾಗಿದೆ ಎಂದೂ, ಮತ್ತೊಂದು ಶಾಸನದಲ್ಲಿ "ಮೂಡಾಣ" ಪದವಿದ್ದು ಅದು ಕನ್ನಡದ ಮೂಡಣವೇ ಎಂದು ವಾದಿಸಲಾಗಿದೆ.
೧೧. ಕ್ರಿಸ್ತ ಶಕ ೨೫೦ ರ ಹಿರೆಹಡಗಲಿ ( ಪಲ್ಲವ ಶಿವಸ್ಕಂದವರ್ಮನ ) ಪ್ರಾಕೃತ ಶಾಸನದಲ್ಲಿ "ಕೊಟ್ಟ" ಎಂಬ ಪದವಿದ್ದು "ಕೋಟೆ" ಎಂಬ ಅರ್ಥ ಸೂಚಿಸುತ್ತದೆ. ಕನ್ನಡದ ಕೋಟೆಯೇ ಇಲ್ಲಿ ಕೊಟ್ಟ ಎಂಬ ಮಾರ್ಪಾಡಾಗಿದೆ.
೧೨. ಚಂದ್ರವಳ್ಳಿಯ ಪ್ರಾಕೃತ ಶಾಸನದಲ್ಲಿ (ಕ್ರಿಸ್ತ ಶಕ ೩೫೦ ) ಕನ್ನಡ ಮೂಲದ "ಪುನಾಟ" ಎಂಬುದು "ಪುನಡ" ಎಂದು ಬಳಕೆಯಾಗಿದೆ.
೧೩. ಮಳವಳ್ಳಿಯ ಪ್ರಾಕೃತ ಶಾಸನವೊಂದರಲ್ಲಿ "ವೇಗೂರಂ" ( ವೇಗೂರು) ಮೊದಲಾದ ಕನ್ನಡ ಸ್ಥಳನಾಮಗಳು ಇವೆ ಎಂದು ಹೇಳಲಾಗುತ್ತದೆ.
.........................
ಮೇಲಿನ ಎಲ್ಲವೂ ವಾದಗಳಷ್ಟೇ. ಇವನ್ನು ಅನೇಕರು ಅಲ್ಲಗೆಳೆದಿದ್ದಾರೆ. ಹಾಗಾಗಿ ಮೇಲೆ ಹೇಳಿದ ಕಾಲದಲ್ಲಿ ಕನ್ನಡ ಇತ್ತು ಎಂದು ಹೇಳಲು ಬಲವಾದ ಸಾಕ್ಷಿಗಲಾಗಾಲ್ಲ.
(ಹಲ್ಮಿಡಿ ಶಾಸನದ ಬಗ್ಗ್ಗೂ ಕೆಲವರು ಕೊಂಕು ತೆಗೆದಿದ್ದರೂ,) ಹಲ್ಮಿಡಿ ಶಾಸನ ಸಿಕ್ಕ ಕನ್ನಡದಲ್ಲಿನ ಮೊದಲ ಶಾಸನ. ಇದರ ಕಾಲ ಕ್ರಿಸ್ತ ಶಕ ೪೫೦ ಎಂದು ಒಪ್ಪಿಕೊಳ್ಳಲಾಗಿದೆ. (ಇದರ ಬಗ್ಗೆ ಇನ್ನೊಂದು ಲೇಖನದಲ್ಲಿ ಬರಯತ್ತೇನೆ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!