http://sampada.net/article/25174
ನೀರ್ಕಜೆಯವರು ಒಂದು ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. (ಎಣ್ಣೆಯ ಬಿಸಿ ತಟ್ಟುವುದು ಯಾವಾಗ?)
ಇದಕ್ಕೆ ಸದ್ದಿಲ್ಲದೇ ಕ್ಯೂಬನ್ನರು ಉತ್ತರ ಕೊಟ್ಟಿದ್ದಾರೆ. "ಪವರ್ ಆಫ್ ಕಮ್ಯುನಿಟಿ" ಎಂದು ಅದರ ಹೆಸರು.
ಕನ್ನಡದಲ್ಲಿ "ಸಹಬಾಳುವೆಯ ಶಕ್ತಿ" ಎಂದು ಭಾವಾನುವಾದಿಸಬಹುದು. ವಿಡಿಯೋ ಕೆಳಗಿನ ಕೊಂಡಿಯಲ್ಲಿದೆ.
http://www.powerofcommunity.org/cm/index.php
ಎಣ್ಣೆಗಾಗಿಯೇ ಎಲ್ಲೆಡೆಯಿಂದ ನಡೆಯುತ್ತಿರುವ ಶೋಷಣೆಗೆ ಉತ್ತರವಾಗಿ ಕ್ಯೂಬನ್ನರು ತಮ್ಮ ಜೀವನ ಶೈಲಿಯನ್ನೇ ಬದಲಿಸಿಕೊಂಡರು. ಎಣ್ಣೆಯಾಗಲೀ, ಡಾಲರುಗಳಾಗಲೀ ಕ್ಯೂಬನ್ನರನ್ನು ಬೆದರಿಸಲಿಕ್ಕಾಗುವುದಿಲ್ಲ.
ಗಾಂಧಿಜಿ ತಮ್ಮ ಹಿಂದ್ ಸ್ವರಾಜ್ ನಲ್ಲಿ ಹೇಳಿದ "ಬಲ" ಇದೇ. ಕ್ಯೂಬನ್ನರು ಸಾಧಿಸಿದ್ದಾರೆ ಗಾಂಧಿಜಿಯ ಮಾತು ಪೊಳ್ಳಲ್ಲವೆಂದು!
ಕಮ್ಯುನಿಸಂ ವಿಷಯವಾಗಿ ಕ್ಯೂಬನ್ನರನ್ನ ಎಷ್ಟೇ ಬೈದುಕೊಂಡರೂ ಶಕ್ತಿಯ ಕುರಿತ ಬಿಕ್ಕಟ್ಟಿಗೆ ಕ್ಯೂಬನ್ನರು ಸ್ಪಂದಿಸಿದ ರೀತಿಗೆ ನಾವು ಅಭಿನಂದಿಸಲೇಬೇಕು. "ಗುಣಕ್ಕೆ ಮಚ್ಚರಮುಂಟೇ?" ಎಂದಿದ್ದಾನೆ ಪಂಪ.
ನಾವೂ ಸಹಬಾಳುವೆ ಮಾಡೋಣ!
ವಿಡಿಯೋವ್ನನು ಆಸ್ವಾದಿಸಿ!
ಪ್ರತಿಕ್ರಿಯೆ (4)