ನನ್ನ ಹೃದಯದ ಹೆದ್ದಾರಿಯಲಿ
ಆಸೆ ಕನಸುಗಳನುಕ್ಕಿಸಿ
ಸರಸರನೆ ಹಾದುಹೋಗಿರುವ ನನ್ನ ಗೆಳತಿಯರೇ
ಒಮ್ಮೆ ನಸು ನಕ್ಕು ಕುಡಿಯ೦ಚಿನಲ್ಲೇ ಕಣ್ಣ ನೋಟ ಬೀರಿ
ಬರೀ ಧೂಳು, ಭ್ರಮೆಯನ್ನೇ ಹಾದಿಗು೦ಟ ಎಬ್ಬಿಸಿ
ಕಾಲದುಗ್ರಾಣದೊಳಗೆ ಕರಗಿರುವ  ನನ್ನ ಗೆಳತಿಯರೇ
ಈಗ ನಾನು ಹುಡುಕುತ್ತಿದ್ದೇನೆ
ನಿಮ್ಮ ಹೆಜ್ಜೆ ಗುರುತುಗಳನ್ನು ಅದೇ ಹೆದ್ದಾರಿಯಲ್ಲಿ
ಎಲ್ಲವೂ ಮಸುಕು ಮಸುಕು
ಆ ಹೆದ್ದಾರಿಯಲ್ಲಿ. ಯಾರಿಗೂ ಖಾಯಮ್ ಸ್ಥಳವಿಲ್ಲ
ಎಲ್ಲರೂ ಅತಿಥಿಗಳೇ
ಹೆಸರಿಗೆ ಮಾತ್ರ ನನ್ನವಳು. ನನ್ನ ಅವಳ
ಸ೦ಬ೦ಧ ಚಿರಶಾಶ್ವತ
ಅದು ಸಲ್ಲುವುದು ಏಳೇಳು ಜನ್ಮಕೂ ಎ೦ದು
ಎಲ್ಲವೂ ಹುಸಿ ಈ ಹೃದಯದ ಹೆದ್ದಾರಿಯಲಿ.
ಇನ್ನೂ ಕಾಯುತ್ತಲೇ ಇದ್ದೇನೆ
ಯಾರು ಯಾರು ಹಾದುಹೋಗುವರು ಈ ಹೆದ್ದಾರಿಯಲಿ ಎ೦ದು?

ಈ ಹೆದ್ದಾರಿಯಲಿ ಎ೦ದಿಗೂ  ನಿರ್ಬ೦ಧವಿಲ್ಲ.. ನಿಷೇಧವಿಲ್ಲ
ಸ೦ಚಾರಕ್ಕೆ.  ಹಾಗೆಯೇ ಸ೦ಕಟಕ್ಕೂ...ನಿಟ್ಟುಸಿರಿಗೂ....

ಈ ನಿರ೦ತರ ಕಾಯುವಿಕೆಗೂ!