ಮಲ್ಲಿಗೆ ಹೂವೆ ನೀನು
ಮಲ್ಲಿಗೆ ಹೂವಿನಂಥ ಸುಂದರಿಯೇ ನೀನು
ಮಲ್ಲಿಗೆ ಬಣ್ಣವ ಹೊಂದಿರುವೆ ನೀನು
ಮಲ್ಲಿಗೆ ಮನವ ಇರುವ ಗೆಳತಿಯೇ ನಿನ್ನ ಮನಸನ್ನ ಕೊದು ನೀನು
ಸಂಪಿಗೆ ನಾಸಿಕವ ಇರುವವಳೇ ನೀನು
ಸಂಪಿಗೆ ದಳದಂತೆ ಕೇಶ ಹೊಂದಿರುವವಳೇ ನೀನು
ಸಂಪಿಗೆ ಕುಡಿಯಂಥ ಕಂಗಳು ಇರುವವಳು ನೀನು
ಸಂಪಿಗೆಯಾ ಕಾಂತಿಯನು ಮೀರಿದೆ ನಿನ್ನ ಕಾಂತಿಯು ಸಂಗವ ಬಯಸಿದೆ ಇಂದು
ಹೂವಿನ ಅಂದವು ನಿನಗೆಲ್ಲಿ ಸಾಟಿಯು ನಿನ್ನಂದಕೆ ನೀನೆ ಸಾಟಿಯು
ದುಂಬಿಯ ಝೇಮ್ಕಾರವು ನಿನಗೆಲ್ಲಿ ಸಾಟಿಯು ನಿನ್ನ ಸ್ವರಕೆ ನೀನೆ ಸಾಟಿಯು
ನನ್ನ ಈ ಕಲ್ಪನೆಯ ಕೊನರಿಗೆ ಯಾರು ಸಾಟಿಯು ಬಂದು ಬಿಡಿಸು ಈ ಕಲ್ಪನೆಯ
ನನ್ನ ಈ ಚಿತ್ರಣಕೆ ನೀನೆ ಸಾಟಿಯು
ಪ್ರತಿಕ್ರಿಯೆ (1)