ಅಂದು..
ನೀನು ನನ್ನನ್ನು ಅರ್ಥ ಮಾಡಿಕೊಂಡಷ್ಟು
ಯಾರೂ ಇಲ್ಲಿಯವರೆಗು ಅರ್ಥ ಮಾಡಿಕೊಂಡಿಲ್ಲ
ಅಂತಂದಿದ್ದೆ.
ಇಂದು...
ನೀನು ನನ್ನನ್ನು ಇಷ್ಟು ದಿನಗಳಾದರು
ಅರ್ಥ ಮಾಡಿಕೊಂಡೇ ಇಲ್ಲ
ಎನ್ನುತ್ತಿರುವೆ.
ಅಂದು ..
ನಮ್ಮಿಬ್ಬರ ಪರಿಚಯದ ಹೊಸತು,
ಆದರು ಅರ್ಥ ಮಾಡಿಕೊಂಡಿದ್ದಿನಿ ಅಂತನಿಸಿತ್ತು.
ಇಂದು...
ಇಷ್ಟು ದಿನಗಳ ಪರಿಚಯದ ನಂತರವೂ
ಅರ್ಥ ಮಾಡಿಕೊಂಡಿಲ್ಲ ಎನ್ನುತ್ತಿರುವೆ.
ಅಂದು..
ಗುರಿಯ ಮುಟ್ಟುವ ತವಕದಲ್ಲಿದ್ದ ನನಗೆ
ದಾರಿಹೋಕನಿಗೆ
ಹಚ್ಚ ಹಸುರಿನ ಸ್ವಚ್ಚ
ತಂಗಾಳಿಯನ್ನು ಬೀಸಿದಂತೆ ಜೊತೆಯಾದೆ ನೀನು..
ಇಂದು...
ಗುರಿಯ ತಲುಪುವ ಹಾದಿಯ
ಬಿರು ಬಿಸಿಲಿಗೆ
ಬೆಂದು ಬೆಂಡಾಗಿ
ದಣಿವಾರಿಸಿಕೊಳ್ಳಲು
ಆಸರೆಯ ಬಯಸುವ ಹೊತ್ತಿನಲ್ಲಿ,
ಹೀಗೇಕೆ ದೂರ ದೂರ ಹೋಗುತ್ತಿರುವೆ.
ಅಂದು-ಇಂದುಗಳ ಮಧ್ಯೆ
ಮುಂದಿನ ಹಾದಿಯನ್ನು
ಜೊತೆಯಾಗಿ ಸಾಗುವುದೊ..
ಅಥವ
ಈ ಹಿಂದಿನಂತೆ
ಒಂಟಿ ಪಯಣವನ್ನು ಮುಂದುವರೆಸುವುದೋ
ಗೊತ್ತಾಗದ ತೊಳಲಾಟದಲ್ಲಿ
ಕಿಶೋರ್ ನ ಹಾಡು
’ಮುಸಾಫಿರ್ ಹು ಯಾರೋ’
ಹಾಡು ಗುನುಗುತ್ತಾ..
ನಿನ್ನ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ..
ನಿನ್ನ ಆತ್ಮ ಸಖ(?)
ಮಂಸೋರೆ.
ಪ್ರತಿಕ್ರಿಯೆ (2)