ಅಲ್ಲೊಂದು ಇಲ್ಲೊಂದು ಹಾಗೊಂದು ಹೀಗೊಂದು
ಲೇಖನಗಳ ಬರೆಯುತ್ತ ಮೆರೆಯುತ್ತಲಿದ್ದೆ
ಅವರಿವರಿಗೆ ತೋರಿಸಿ ಹೊಗಳಿಕೆಗಳ ಪಡೆದು
ಇದುವೇ ಸಾಧನೆಯೆಂಬ ಚಿಪ್ಪಿನೊಳಗಿದ್ದೆ
ಹೊರ ಇಣುಕಿದಾಗ ಕಂಡಿತು 'ಸಂಪದ'ವೆಂಬ ಸಾಗರ
ಅರಿಯಿತು ಇದು ಕ್ರಿಯಾಶೀಲ ನವ್ಯಸಾಹಿತಿಗಳ ಆಗರ
ಇಂತಹ ಹರುಷದಲಿ (ಶ್ರೀ)ಹರ್ಷರಿಗೆ ಆಯಿತೊಂದು ಅವಮಾನ
ತಡವಾಗಿಯಾದರೂ ಕೇಳುವೆ ಈ ಮೂಲಕ ಕ್ಷಮಾದಾನ
ತಪ್ಪುಗಳನು ತಿದ್ದಿ ತೀಡಿ ಪ್ರೋತ್ಸಾಹಿಸುವಿರೆಂದು
ಸಂಪದಿಗ ಮಿತ್ರರಲ್ಲೊಂದು ಆತ್ಮೀಯ ವಿನಂತಿ..
ಪ್ರತಿಕ್ರಿಯೆ (2)