ಈ ದಿನ ವಿಜಯಕರ್ನಾಟಕದ ನೋಡ್ತಾ ಇದ್ದೆ. ಅಲ್ಲಿನ ಅವಿವೇಕಗಳನ್ನು, "ಒಂದು ಸೀಮಿತ ದ್ರುಷ್ಟಿಕೊನಕ್ಕಷ್ಟೇ ಬದ್ದ " ವಿವರಣೆಗಳ ಬಗ್ಗೆ ಬರೀಬೇಕು ಅಂತ ಇದ್ದೆ. ಇವತ್ತು ಶನಿವಾರ, ಅಲ್ದೆ ಬೇಕಾದಷ್ಟಿ ಟೈಮು ಬೇರೆ ಇದೆ... ಸರಿ ಹಾಗಾಗಿ ಈ ಕೆಲ ಸಾಲುಗಳು.
ಇದು ಚರ್ಚೆ... ನಿಮ್ಮ ಅಮೂಲ್ಯ ತಿಳುವಳಿಕೆ ಸಾಗಿ ಬರ್ಲಿ.
೧. ಕವಿ ಮೊದಲೋ ಅತ್ವ ಕಾವ್ಯ ಮೊದಲೋ ಅಂತ ನಾವು ನೋಡಿದಾಗ ನಮಗೆ ಕಾವ್ಯವೇ ಮೊದಲು .. ಕಾವ್ಯ ಬರೆದವನು ಕವಿ ಯಾಗ್ತಾನೆ ಅನ್ನೋ ತಿಳಿಯುತ್ತೆ.
ಹಾಗಾಗಿ ಈ ಎರಡು ಪದಗಳ ಮೂಲವನ್ನು ನೋಡೋಣ.
"ಕಾಂತ ಸಂಹಿತಾ ರೂಪ"ವಾಗಿ ಯಾವುದಿರುವುದೋ ಅದೇ ಕಾವ್ಯ. ಇದು ಕಾವ್ಯದ ಪ್ರಸಿದ್ದ ವಿವರಣೆ. ಹೆಚ್ಚಿನ ಪಂಡಿತರೆಲ್ಲ ಒಪ್ಪಿಕೊಂಡಿದ್ದಾರೆ. http://sampada.net/blog/savithru/21/09/2007/೫೭೫೦ ಇಲ್ಲಿ ಒಮ್ಮೆ ಬರೆದಿದ್ದೆ.
ಯಾವ ವ್ಯಕ್ತಿ ಇಂತ ಕಾಂತ ಸಂಹಿತರೂಪದಲ್ಲಿನ ಸಾಹಿತ್ಯವನ್ನು ಬರೆಯುತ್ತಾನೋ ಅವನು ಕವಿಯಾಗುತ್ತಾನೆ. ಕವಿಯಿಂದ ಕಾವ್ಯವಲ್ಲ!. ಕಾವ್ಯದಿಂದ ಕವಿ.
ಆದರೆ ಇಲ್ಲಿನ ಪದೊನ್ನತಿಕಾರನ ಕವಿ ಅನ್ನೋ ವಿವರಣೆ ನೋಡಿ... ಹಾಸ್ಯಾಸ್ಪದವಾಗಿದೆ. ತಿಳಿದಿರುವವನು?, ಬುದ್ದಿವಂತ?.. ಹಾಗಾದರೆ ನಮ್ಮ ವಿಜ್ಞಾನಿಗಳೂ, ಸಂಶೋಧಕರೂ ಕವಿಗಳೇ? .
ಇಲ್ಲಿನ ಇನ್ನೊಂದು ಅವಿವೇಕ ನೋಡಿ...
ಕನ್ನಡದ ಕಲಿಕೆ ಅನ್ನೋದು ಸಂಸ್ಕೃತದ "ಕೊ" ಧಾತುವಿಂದ ಬಂದಿದೆ ಅಂತೆ... ಥೂ ಅಸಹ್ಯ.. ಸಂಸ್ಕ್ರುತ್ರ ಕನ್ನಡಕ್ಕಿಂತ ಹಳೆಯ ಭಾಷೆ ಅನ್ನೋ ಒಂದೇ ಕಾರಣಕ್ಕೆ ಏನೆಲ್ಲಾ ಹೊಲಸು ತೀರ್ಪುಗಳು. ಕೇಶೀರಾಜ ಕನ್ನಡದ್ದವ್ವೆ ಆದ ಸುಮಾರು ೯೫೮ (?) ಧಾತುಗಳನ್ನು ಪಟ್ಟಿ ಮಾಡಿದ್ದಾನೆ. ಈ ಪದೊನ್ನತಿಕಾರನಿಗೆ ಶಬ್ದಮಣಿದರ್ಪನವನ್ನು ಒಮ್ಮೆಯಾದರೂ ತಿರ್ವಿಹಾಕಲು ಯಾರದ್ರೂ ಹೇಳ್ರಪ್ಪೋ!!..
ಇನ್ನೂ ಇಂಗ್ಲೀಷಿನ ಎಲ್ಲ ಪದಗಳೂ ಸಂಸ್ಕೃತದಿಂದ ಹುಟ್ಟಿವೆ ಅಂತ ಹೇಳೋ ಅವಿವೇಕ ಇವರಿಗೆ ಯಾಕೋ ಗೊತ್ತಿಲ್ಲ. ಇವೆರಡೂ ಒಂದೇ ಭಾಷ ವರ್ಗ ಕ್ಕೆ ಸೇರಿದ್ದರೂ ...ಅವು ತುಂಬಾ ದೂರದ ಸಂಬಂಧಿಗಳು.
ಅಪರೂಪಕ್ಕೊಮ್ಮೆ ಕನ್ನಡ ಪದದ ಬಗ್ಗೆ ( ಸಧ್ಯ ಅದು ಸಂಸ್ಕೃತ ಅಂತ ವಾದಿಸಿಲ್ಲ!) ಮಾತಾಡ್ತಾ ಇರೋದು ನೋಡಿದರೆ ಆಶ್ಚರ್ಯ ಆಗ್ತಾ ಇದೆ.
___LINK_OPEN_href="http://sampada.net/image/25543?size=_original"___http://sampada.net/image/25543?size=_original
ಪ್ರತಿಕ್ರಿಯೆ (2)