ಚುಚ್ಚಾಣಿ 

ಚುಚ್ಚಾಣಿ ಚೂಪಿನದಣ್ಣಾ

ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ

ಚುಚ್ಚಾಣಿ ಚೂಪಿನದಣ್ಣಾ||                ||ಪ||

 

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ

ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ             ||ಚುಚ್ಚಾಣಿ||

 

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ

ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ||    ||ಚುಚ್ಚಾಣಿ||

 

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ

ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

 

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ

ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ||      ||ಚುಚ್ಚಾಣಿ||

 

ಚುಚ್ಚಾಣಿ ಚೂಪಿನದಣ್ಣಾ

ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ

ಚುಚ್ಚಾಣಿ ಚೂಪಿನದಣ್ಣಾ||

************

-ಕವಿನಾಗರಾಜ್. 

(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ದೊಡ್ಡದಣ್ಣಾ"..)

ಲೇಖನ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಬರಹಗಳಿಗೆ ಲಿಂಕ್: ಕವನ 'ಸ್ವಾರ್ಥ: http://sampada.net/article/25562, ಕವನ "ಏನಂತೆ?" : http://sampada.net/image/25604, ಕಥೆ "ಪಾಪಶೇಷ": http://sampada.net/article/25691, ಕವನ: "ಎಂತು ಅರ್ಚಿಸಲಿ?" : http://sampada.net/article/25719.