ಸಾಕೇ.....ಬೇಕೆ
ಸಾಕು ...ಎಂದರೆ ಸಾಕೇ?
ಬೇಕು ....ಎಂದರೆ ಬೇಕೇ ?
ಸಾಕು ಎಂದರೆ ಸಾಕಾಗುವದಿಲ್ಲ!
ಬೇಕು ಎಂದರೆ ಬೇಕಾಗುವದಿಲ್ಲ
ನನ್ನ ಈ ಕಿರು ಕವನ ಓದಿ...
ಸಾಕು....... ಬೇಕಾಯಿತಲ್ಲ !
ಓಡಿ.....ಓಡಿ...!
ಓಡಿ ಓಡಿ ಓಡಿ..
ಗಾಡಿ ಬಂತು ಓಡಿ
ಎಲ್ಲೂ ನಿಲ್ಲ ಬೇಡಿ
ನಿಂತರೆ ಬದುಕು ರಾಡಿ
....................(ಮುಂದುವರಿಯುವದು)- ಇದು ನಾನು ತಾಯಿ ಉದರದಲ್ಲಿದ್ದಾಗ ನೆನಪಿಸಿಕೊಂಡು ಎಲ್.ಕೆ.ಜಿ.ಯಲ್ಲಿರುವಾಗ ಬರೆದದ್ದು.
ಒಂದು ...ಎರಡು
ಒಂದು ಎರಡು
ಮೂರು ನಾಲ್ಕು
ಎಣಿಸಲು ಬರದು
ಇಷ್ಟೇ ಸಾಕು
''''''''''''''''''''''''''''''''''''''''''''''( ಯು.ಕೇ.ಜಿ.ಯಲ್ಲಿ ನಮ್ಮ ಟೀಚರ್ ನನಗೆ ಹೆದರಿಸಿ ಹೊಡೆದು ಬರೆಸಿದ ಕವನ)
( ದಯವಿಟ್ಟು ಸಂಪದಿಗರು ನನ್ನ ಕವನಗಳಿಗೆ ಹೆಚ್ಚು ಪ್ರತಿಕ್ರೀಯೆ ನೀಡಿದರೆ ನನ್ನಲ್ಲಿ ಅಡಗಿ ಹೊಂಚು ಹಾಕಿ ಕುಳಿತಿರುವ ಕವಿಶಕ್ತಿ ಹುಚ್ಚೆಬ್ಬಿಸಿ ಕುಣಿಸಬಹುದು ದಯಮಾಡಿ ಸಹಕರಿಸಿ )
ವಿಶೇಷ ಸೂಚನೆ: ಅತಿ ಹೆಚ್ಚು ಪ್ರತಿಕ್ರೀಯೆ ನೀಡಿದವರಿಗೆ ನಿಮ್ಮ ಒಂದು ಜನ್ಮಕ್ಕೆ ಸಾಕಾಗುವಷ್ಟು ಇಂತಹ 1000 ಕಿರು ಕವನಗಳ ಸಂಕಲನ ಉಚಿತವಾಗಿ ಮನೆಗೆ ತಲುಪಿಸಲಾಗುವದು -ಎಚ್ಚರ!
ಪ್ರತಿಕ್ರಿಯೆ (9)