ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ
ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ
ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ
ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ
ಅರಿವನು ಅರಸದೆ ಕೆಸರನು ಬೆರೆಸದೆ
ತಿಳಿವನೆ ಮೆರೆಸುತೆ ಎಲ್ಲೆಲ್ಲೂ
ಅರಿವಿನ ಪಕ್ಷಿಯ ತೆರೆಯುತೆ ಅಕ್ಷಿಯ
ನಿರುತದೆ ಸತ್ಯವ ಅರಸುತಲೂ
ಹರಸುವ ನಮಿಸುವ ಕ್ಷಮಿಸುವ ಮನದಲು
ಸ್ಫುರಿಸುವ ಭಾವವೇ ಬರಿಸುತಲೂ
ಕಾಣದ ಪ್ರೀತಿಯ ಆಂತರ್ಯವರಿಯುವೆ
ಅರಸುತಲಿದ್ದೂ ಮನವೆಲ್ಲಾ
ಹೃದಯದ ಹೊರಗೂ ಒಳಗೂ ಕಾಣುವೆ
ಹುಡುಕದೇ ಇದ್ದೂ ದಿನವೆಲ್ಲಾ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಮತ್ತೊಮ್ಮೆ ಮಗುವಾಗಬಾರದೇ !
ಬಾವತೀರ
' ಶಿವ ಅಶಿವ '
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)