ಅವನ... ಕಸಗಳೆಲ್ಲ ....
ಬೀದಿಯುದ್ದಕ್ಕೂ ಚೆಲ್ಲಾಪಿಲ್ಲಿ
ಆದರೂ
ಅದರ ಬದಿಯೇ ಹಾದು
ಹೋಗುವಾಗ...
ತನ್ನದಲ್ಲವೆಂಬ ನಿರ್ಲಕ್ಷ..!
ಅದರಲ್ಲೇ ಬದುಕು
ಹುಡುಕುವ
ಚಿಂದಿ ಆಯುವ ಹುಡುಗ
ಕಸದೊಳಗೆ ಅರಸುತ್ತಿರುವಾಗ.....!
ಅವನು.........
ತಟ್ಟನೆ ನಿಂತ.. !
'ಕಣ್ತಪ್ಪಿನಿಂದ ಬೇಕಾದ
ವಸ್ತು ತಾನು ಎಸೆದಿದ್ದರೆ...?"
ಮತ್ತೆ ಕಸದೆಡೆಗೆ
ಕಣ್ಣು ಹಾಯಿಸುತ್ತಾನೆ !
ಈ ಬದುಕೇ ಹೀಗೆ....!
ಇಲ್ಲದ್ದರಲ್ಲಿ ಇದ್ದದ್ದು ಹುಡುಕುವ
ಕೆಲವರು.....
ಎಸೆದದ್ದರಲ್ಲಿ ಬದುಕು ಕಾಣುವ
ಹಲವರು.....
-ಭಾಗ್ವತ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)