ಹುಡುಗ....!
ಸೂರ್ಯ ಮೂಡುವಾಗಲು
ಮುಳುಗುವಾಗಲೂ ....ಕೆಂಪು !
ಅದರಂತೆ...ನಿನ್ನ ಅಧರ..!
ಎಂದರಿತಿದ್ದೆ.
ನೀ.. ನಮ್ಮನೆಎದುರಿನ
ದಾರಿಯಲಿ ಹಾದು ...
ಹೋಗಿಬರುವಾಗ
ನಿನ್ನ ಕೆಂಪು ತುಟಿಯಂಚಿನ..
ಸ್ನಿಗ್ಧ ನಗೆಗಾಗಿ ..ಕಣ್ಣರಳಿಸಿ
ಕಾಯುತ್ತಿದ್ದೆ ....!
ಆದರೆ,
ನೀನಿಂದು ಪಾನ್ ಅಂಗಡಿಯ
ಬಳಿ ನಿಂತು. ಮೆಲ್ಲುತ್ತಿರುವದ
ಕಂಡೆ.....!
ನಿನ್ನ ಹವಳದ ತುಟಿಯ ಬಣ್ಣ
ಬಯಲಾಗಿದೆ !
ಪ್ರತಿಕ್ರಿಯೆ (7)