(೧೩೬) "ನೀನು ದೇವರೆಂಬ ನಂಬಿಕೆಯನ್ನು ಕುರಿತೇ ಹೆಚ್ಚು ಹೆಚ್ಚು ಹೇಳಿಕೆಗಳನ್ನು ಬರೆಯುತ್ತಿರುವಂತಿದೆಯಲ್ಲ?"
"ಬೇಕೆಂದರೂ ಬೇರಿನ್ಯಾವುದರ ಬಗ್ಗೆ ಬರೆಯಲು ಸಾಧ್ಯ, ಹೇಳಿ?"
(೧೩೭) ನೀನು ಅದರ ಅಳಕ್ಕೆ ಇಳಿದು ಏನನ್ನಾದರೂ ಹುಡುಕದಿದ್ದಲ್ಲಿ ಅದು ಭೂಪಟ ಹೇಗಾದೀತು? ಭೂಪಟವನ್ನೇ ಹುಡುಕದಿದ್ದಲ್ಲಿ ನಿಮ್ಮನ್ನೇ ನೀವು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
(೧೩೮) ನಾವು ಇನ್ನೊಬ್ಬರ ಮನೆಯನ್ನು ಹೊರಗಿನಿಂದಲೂ, ನಮ್ಮೊಬ್ಬರ ಮನೆಯನ್ನು ಒಳಗಿನಿಂದಲೂ ಗ್ರಹಿಸುತ್ತೇವೆ. ಬೇರೊಬ್ಬರಿಗೆ ನಾವು ನಮ್ಮ ಮನೆಯನ್ನು ನಮಗೆ ಹೇಗೆ ಬೇಕೋ ಹಾಗೆ ಮಾತ್ರ ತೋರಿಸುತ್ತೇವೆ. ನಾವಿಲ್ಲದ ನಮ್ಮ ಮನೆಯು ಬೇರೊಬ್ಬರಿಗೆ ತೂಗುಹಾಕಿದ ವಸ್ತ್ರದಂತೆ--ಅದು ನಮ್ಮ ವ್ಯಕ್ತಿತ್ವವನ್ನು ಅವರಿಗೆ ಲವಲೇಶವೂ ಪರಿಚಯಿಸದು!
(೧೩೯) ಯಾರಿಗಾದರೂ ಯಾರು ಬೇಕಾದರೂ ಕೊಡಬಹುದಾದ ಅತ್ಯುತ್ತಮ ಔಷದಃ ಆಶಾವಾದ! ಸೂಜಿ, ಮಾತ್ರೆ ಮತ್ತು ಶಸ್ತ್ರಚಿಕಿತ್ಸೆಗಳು ಏನಿದರೂ ಈ ಆಶಾವಾದವನ್ನು ಉತ್ತೇಜಿಸುವುದಷ್ಟೇ!
(೧೪೦) ಪ್ರತಿದಿನ ನಾವು ನಿದ್ರೆಗೆ ಜಾರಿ ಮತ್ತೆ ಎಚ್ಚರದ ಸ್ಥಿತಿಗೆ ಮರಳಿಬರುವುದಿಲ್ಲ. ಆಗಾಗ ಪ್ರಜ್ಞಾವಸ್ಥೆಗೆ ಜಾರಿ ಅದರಿಂದ ಹೊರಬರುತ್ತೇವೆ--ಪ್ರತಿನಿತ್ಯ ಹಾಗೂ ಪ್ರತಿಜೀವನದಲ್ಲಿ!
ಪ್ರತಿಕ್ರಿಯೆ (1)