(೩೯೬) ಅಳತೆಮಾಪಕವು ದೇಹವೊಂದರ ಎತ್ತರ, ಅಗಲಗಳನ್ನು ಅಳೆಯಬಹುದೇ ವಿನಃ ಅದರೊಳಗೆ ಅಡಕವಾಗಿರುವ ಅಹಂಕಾರವನ್ನಲ್ಲ.
(೩೯೭) ನೀವು ಅವರಿಗಾಗಿಯೇ ಮುಡಿಪಾಗಿಟ್ಟ ಮೆಚ್ಚುಗೆಯ ನುಡಿಗಳನ್ನು ಉಚ್ಛರಿಸುವ ಮುನ್ನವೇ ಅದನ್ನು ನಿರಾಕರಿಸುವಾತನೇ ಸಿನಿಕ.
(೩೯೮) ತುರಿಯಾನಂದವೆಂಬುದು ಯಾವಾಗಲೂ ಇಂದ್ರೀಯ ಬಯಕೆಯನ್ನು ತೃಪ್ತಿಪಡಿಸುವುದೇನಲ್ಲ. ಇತರರ ಇಂದ್ರೀಯ ಬಯಕೆಗಳನ್ನು ನಾಶಮಾಡುವುದೂ ಅದರ ಯೋಜನೆಯ ಒಂದು ಭಾಗವೇ.
(೩೯೯) ಇತರರ ಖರ್ಚಿನಲ್ಲಿ ನಮ್ಮ ಇಂದ್ರೀಯ ಸುಖವನ್ನು ಹುಡುಕುವಲ್ಲಿಂದ ಪ್ರೀತಿಯು ಆರಂಭಗೊಂಡು, ನಮ್ಮದೇ ಖರ್ಚಿನಲ್ಲಿ ಇತರರನ್ನು ಖುಷಿಯಾಗಿಡುವುದರಲ್ಲಿ ಅದು ಅಂತ್ಯಗೊಳ್ಳುತ್ತದೆ.
(೪೦೦) ನಮ್ಮ ಬದುಕಿನಲ್ಲಿ ಆಗಿಹೋದ ಘಟನಾವಳಿಗಳ ಸಂಖ್ಯೆಯ ಒಟ್ಟಾರೆ ಮೊತ್ತವು ನಾವು ಬದುಕಿದ ತೀವ್ರತೆಗೆ ನೇರವಾಗಿ ಸಂಬಂಧಿಸಿದೆ. ಅಂತಹ ಸಂಖ್ಯೆ ಹೆಚ್ಚಿದ್ದಷ್ಟೂ, ನಾವು ಕಡಿಮೆ ಕಾಲವನ್ನು ವ್ಯರ್ಥಗೊಳಿಸಿದ್ದೇವೆ ಎಂದರ್ಥ!
ಪ್ರತಿಕ್ರಿಯೆ (1)