ಮನಸ್ಸಿನ ಅಗೋಚರ ಭಾವನೆಗಳಿಗೆ ಆಳವಾದ ಪ್ರಭಾವ ಬೀರುವುದು ವಸ್ತುವಿನ ಮೂಲದಿಂದ ಹೊರಹೊಮ್ಮುವ ಅಮೂರ್ತ ಭಾವ ತರಂಗಗಳು.
ಗುಂಪಿನಲ್ಲಿ ಕಳೆದುಕೊಳ್ಳುವ ವಸ್ತುವಿನ ಮೂಲ ಭಾವ ಗುಣಗಳು ಆ ವಸ್ತು, ಆಕೃತಿ, ಮನುಷ್ಯ, ಮರ ಯಾವುದೇ ಆಗಲಿ, ಆ ಗುಂಪಿನಿಂದ ಪ್ರತ್ಯೇಕಿಸಿ, ಅದಕ್ಕೆ ಕೊಡಬೇಕಾದ ಮೂಲ ಗಮನವನ್ನು ಅದರಲ್ಲಿ ಕೇಂದ್ರೀಕರಿಸಿದಾಗ ವೀಕ್ಷಿಸುವ ವೀಕ್ಷಕನ ಅಂತಃಭಾವಕ್ಕೆ ವಸ್ತುವಿನಿಂದ ಹೊರಹೊಮ್ಮುವ ರಸಾನುಭಾವ ತರಂಗಗಳು ಆವರಿಸಿಕೊಳ್ಳುವುದು.
ಈರೀತಿ ಪ್ರತ್ಯೇಕಿಸಿ ಪ್ರತ್ಯೇಕ ಗಮನವನ್ನು ನೀಡಲು ಮೂಲ ಕಾರಣವೆಂದರೆ, ಪ್ರತಿಯೊಂದು ಆಕೃತಿ, ವಸ್ತು, ಮರ, ಮನುಷ್ಯನಿಗೂ ತನ್ನದೇ ಆದ ಮೂಲ ಗುಣ, ಸ್ವಭಾವ, ಅಂತಃಸತ್ವ ಹೊಂದಿರುವುದರಿಂದಲೇ ಅಲ್ಲವೆ ನಾವು ಅದಕ್ಕೆ ಅದರದೇ ಆದ ಗುರುತನ್ನು ನೀಡಿರುವುದು. ಆ ಕಾರಣದಿಂದಾಗಿ ನಾವು ಅದನ್ನು ಅರಿಯಲು, ಅದರ ಅಂತಃಸತ್ವ ತಿಳಿಯಲು ನಾವು ನಮ್ಮ ತತ್ವಾಧಾರಿತ ಅನಿಸಿಕೆಗಳನ್ನು ಹೊರಗಿಟ್ಟು ಅನ್ವೇಷಣಾಭಾವದಿಂದ ರಸಾನುಭವ ಪಡೆಯಬೇಕಾಗುತ್ತದೆ.
ಈ ರಸಾನುಭಾವ ತರಂಗಗಳ ಅನುಭವ ಪಡೆಯಬೇಕಾದರೆ ನಾವು ನೋಡುವ ಪ್ರತಿಯೊಂದು ವಸ್ತು, ಆಕೃತಿ, ಮರ, ಮನುಷ್ಯನನ್ನು ಪ್ರತ್ಯೇಕಿಸಿ, ಪ್ರತ್ಯೇಕದಲ್ಲಿ ಪ್ರತ್ಯೇಕ ಆದ್ಯತೆ ನೀಡುವುದರಿಂದ ಆ ರಸಾನುಭಾವವನ್ನು ಪಡೆಯಬಹುದೆಂದು ನನ್ನ ಅನಿಸಿಕೆ.

ಈ ಲೇಖನ ಎರೆಡು ವರ್ಷಗಳ ಹಿಂದೆ ಬರೆದದ್ದು.. ಹೀಗೆ ಕಡತಗಳಲ್ಲಿ ಹುಡುಕುತ್ತಿರುವಾಗ ಸಿಕ್ಕಿತು.
ಚಿತ್ರಗಳು : ಮಂಸೋರೆ
ಪ್ರತಿಕ್ರಿಯೆ (4)