ಬೇಸಿಗೆಗೆ ಬಾನು ಸುಟ್ಟು
ಆಗಾಗ ತೊಟ್ಟಿಕ್ಕುವ ಹನಿಗಾಗಿ..
ಬಾಯ್ತೆರೆದು ಕುಳಿತ ಇಳೆ
ಬಸವಳಿದ ಹಸಿರೆಲೆಯ ನರ..!
ಸುಕ್ಕುಗಟ್ಟಿದ ಮುದಿ ಚರ್ಮ
ಎದೆಹಾಲು ಹನಿಗಾಗಿ ಹಾತೊರೆವ
ಎಳೆ ಕಂದಮ್ಮನ ಒಣಗಿದ ತುಟಿ
ತಾಯಿಯ ದೇಹ ಸೌಂದರ್ಯದ ಹಟ..!
ಆಗುವದೇ...ದಿಟ ?
ವಿರಹ ವೇದನೆಯ ಕಣ್ಣನು ನೆಟ್ಟು
ನಿಶ್ಚಿತಾರ್ಥದ ಅಲ್ಭಂ ಮೇಲೆ....
ಉಂಗುರ ಬೆರಳಾಟ....
ಬಸ್ಸು ಬಂತೆಂದರೆ ಗಬಕ್ಕನೆ.!
ಕಿಟಕಿ ಸರಳ ಹಿಂದೆ ಬಟ್ಟಲಗಲದ ಕಣ್ಣು.!
ಇಣುಕುವದು ಸುಮ್ಮನೆ..
ಸೇನೆಯಲ್ಲಿರುವ ನಲ್ಲ ಬಂದಿಹನೇ ?....ಇಲ್ಲ !
ಇಳಿವಯಸ್ಸಿನ ಮುದಿ ಜೀವಗಳೊಂದಿಗೆ
ನಂಬಿಕೆಯ ನಾಯಿ...ಮಾತ್ರ !
ದೂರದೂರಲಿ ಮಗನ ಹೊಟ್ಟೆಪಾಡು..
ಪೋನಾಯಿಸಿದ ವಿಷಯ.....
ನೆರಮನೆಯ ಹುಡುಗ "ಗುಳಿಗೆ" ತಂದಿತ್ತು
ಕಿಸಕ್ಕನೆ ನಕ್ಕುನುಡಿದ
" ನಿಮ್ಮ ಮಗ ಬರಲು ಆರು ತಿಂಗಳು ಲೇಟು
ಆ ವರೆಗೆ ನಾನೇ ನಿಮ್ಮ ಅನ್ನಕೆ ತಾಟು "
ಪ್ರತಿಕ್ರಿಯೆ (9)