ಕೆಲವು....
ಹಳೆಯ ಪ್ರೀತಿ ನೆನಪುಗಳು....
ಸೊಗಸಾಗಿ ಇಸ್ತ್ರಿ ಮಾಡಿ
ಬಚ್ಚಿಟ್ಟ ಗರಿಗರಿ ವಸ್ತ್ರ !
ನಮ್ಮ ಹೊಸತನಕ್ಕೆ ಆಗಾಗ ಅಸ್ತ್ರ !
ಇನ್ನು ಕೆಲವು....
ಅಮ್ಮ ಮರೆತು ಮುಚ್ಚಿಟ್ಟ
ಹುಳಿ ಬಂದ ಮಜ್ಜಿಗೆ
ಆದರೂ......
ತುಂಬ ಪ್ರೀತಿ ಅಜ್ಜಿಗೆ
ಮಥಿಸುವಳು ಬೆಣ್ಣೆಗಾಗಿ....!.
ಬಾಲ್ಯದ..ಕೆಲ ನೆನಪುಗಳು...
ಹಾಲು ಬೇಡಿ ಕಾಲು ಸುತ್ತುವ ಬೆಕ್ಕು
ತಾಯ್ ಬರವ ನಿರೀಕ್ಷಿಸುವ ಕರು
ಹನಿ ಜಲಕ್ಕಾಗಿ ತಲೆತಗ್ಗಿಸಿದ ಲತೆ
ಕೆಲವು ಕಹಿ.....ನೆನಪುಗಳು
ಮನದ ಇರುಳಲಿ ಭಯದ ನಶೆ
ಏರಿಸುವ ಗೂಬೆ !
ಆದರೂ...
ಹೃದಯ ಹಣತೆಯಲಿ
ಸಿಹಿನೆನಪಿನ ಜೀವದೆಣ್ಣೆ
ಬರಿದಾಗದೆ ...ಜೀವ ಸೆಲೆಯಾಗಲಿ !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)