ಉದ್ದ ರಸ್ತೆ ಅಡ್ಡವಿರ ಬೇಕೆನ್ನುವ
   ಈತ....
  ಸುರೆಯ ತೆಕ್ಕೆಯಲ್ಲಿಯ
   ಅಸುರ
 
   ಇವನ ಹೆತ್ತವಳು
   ಹೊತ್ತು ಮುಳುಗಿದ್ದರೂ
   ಹೊತ್ತು......ಮಾರುತ್ತ
   ತುತ್ತು ಗಂಜಿಗೆ ಅಲೆದಾಡುತ್ತಾಳೆ.

   ಎಲುಬಿನ ಹೆಗಲಲ್ಲಿ
   ಮತ್ತನ್ನು ಹೊತ್ತು ನಿಂತ ಇವಗೆ
   ಹೊತ್ತು ಮುಳುಗಿರುವ
   ಅರಿವಿಲ್ಲ
 
   ತಾಯ್ ಗಂಜಿಯ ಎಂಜಲಿಗೆ
   ಬೀದಿ ನಾಯಿಯಾದರೂ
   ಬಾಲ ಅಲ್ಲಾಡಿಸುತ್ತದೆ

   ಆದರೆ...
   ಈತ ಮತ್ತೆ....ಮತ್ತಿಗಾಗಿ
   ಹೊತ್ತೇರುವ ಮೊದಲೇ
   ಸುತ್ತುತ್ತಾನೆ...!
 
   ತಾಯಿ ಬದುಕು....
   ಇವನ 'ಮತ್ತು'

   ಹೊತ್ತು !

   ಹೊತ್ತು ...ಮುಳುಗುತ್ತಿದೆ.... !