___LINK_OPEN_href="http://3.bp.blogspot.com/_Xahtxjj2WYE/TDdZO-dO12I/AAAAAAAAAsc/cJMEIhPTd0M/s1600/Sanchari.bmp"___
ಗಾಳಿಯೇ ನೋಡು ಬಾ..ದೀಪದಾ ನರ್ತನ.
ರಾತ್ರೀಯೆ ನೀಡು ಬಾ ಮಾಯದಾ ದರ್ಪಣ...
ಇದೆಂತ ಅದ್ಭುತ ಕಲ್ಪನೆ ಅಲ್ವಾ. ಗಾಳಿಯೂ ನಮ್ಮೊಟ್ಟಿಗೆ ಇರುತ್ತದೆ. ದೀಪವೂ ನಮ್ಮೊಟ್ಟಿಗೆ ದಿನವೂ ಪ್ರಜ್ವಲಿಸುತ್ತದೆ. ನರ್ತನ ಟಿವಿಗಳಲ್ಲಿ ಬರ್ತಾನೇ ಇರ್ತವೆ. ಇಂತಹ ಸಾಲುಗಳು ಹುಟ್ಟಲು ಸಾಧ್ಯವೆ. ಹಾಗೆ ಹುಟ್ಟಿದರೆ ಅದು ಕವಿ ಮನಸ್ಸಿನಲ್ಲಿ ಸಾಧ್ಯ. ರವಿ ಕಾಣದ್ದು..ಕವಿ ಕಂಡ ಅಂತರಾ ಅಲ್ಲ. ಅದು ಎಲ್ಲ ಕಾಲಕ್ಕೂ ನಿಜವೇ. ಬೀಸುವ ಗಾಳಿಗೆ...ಅತ್ತ..ಇತ್ತ ಆರಲು ಸಜ್ಜಾಗುವ ದೀಪದ ಅಂತ್ಯ ಇಲ್ಲಿ ಕವಿಗೆ ನರ್ತನ ಅನಿಸುತ್ತದೆ.
ಇಂತಹ ಸಾಲುಗಳು ಸುಮ್ಮನೆ ಪುಸ್ತಕದಲ್ಲಿ ಉಳಿದಿದ್ದರ ಹೆಚ್ಚು ಪ್ರಚಾರ ಸಿಗ್ತಿತ್ತೋ ಇಲ್ವೋ. "ಸಂಚಾರಿ" ಚಿತ್ರದಲ್ಲಿ ಜಯಂತ್ ಕಾಯ್ಕಿಣಿಯವರ ಸಾಲುಗಳಿವು.. ಪಲ್ಲವಿನೇ ಇಷ್ಟೊಂದು ಚೆಂದ ಅದ್ಮೇಲೆ ಚರಣ ಹೇಗಿರಬೇಕು..ನೀವೇ ಕಲ್ಪಿಸಿಕೊಳ್ಳಿ...
ನಿನ್ನಂತೆ ನನ್ನಾರು ಕಾಡಿಲ್ಲ..
ಅದುವೇ ಪ್ರೀತಿಯ ಲಕ್ಷಣ...
ಗಾಳಿಯ ಹಾಡಿಗೆ ಪ್ರೀತಿ ಸಾಲುಗಳು ಸೇರುತ್ತವೆ. ಪ್ರೀತಿ-ಪ್ರೇಮದ ಅಲೆಯನ್ನೂ ಹರಿಸುತ್ತವೆ. ಕಾರಣ ಕ್ರಿಮಿನಲ್ ವೊಬ್ಬನ ಪ್ರೇಮಕಥೆಯ ಚಿತ್ರವೇ "ಸಂಚಾರಿ". ಗಾಳಿಯೇ ನೀ ನೋಡು ಬಾ...ಈ ಹಾಡೊಂದರ ಮೇಲೆನೆ ೨೦ ದಿನ ಕೆಲಸ ಮಾಡಲಾಗಿದೆ. ಅದು ಬೇಕು..ಇದು ಬೇಕು ಅಂತ ಕೊನೆಗೆ ಗಾಳಿಯೇ ನೀ ನೋಡು ಬಾ ಅನ್ನೊದು ಹೊರಹೊಮ್ಮಿದೆ.
ಸಂಚಾರಿಯಲ್ಲಿ ವಿ.ನಾಗೇಂದ್ರ ಪ್ರಸಾದ್ ವಿರಚಿತ ಗೀತೆಗಳು ಇವೆ. ಒಂದಕ್ಕಿಂತವೊಂದು ಚೆಂದನೆಯ...ತಣ್ಣನೆಯ ಸಾಹಿತ್ಯದ ಗೀತೆಗಳು ಅನಿಸದೇ ಇರದು. ಏಕೆಂದರೆ, ಮಧುರ